ಜಿಲ್ಲೆ

ಸರ್ಕಾರಿ ಆಸ್ಪತ್ರೆಗೆ ಸಚಿವ ಸುಧಾಕರ್ ದಿಢೀರ್ ಭೇಟಿ

ಧನಂಜಯ ಎಸ್.ಹಕಾರಿ.

ಹಿರಿಯೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೋಮವಾರ ದಿಢೀರ್ ಭೇಟಿ ನೀಡಿ, ಆರೋಗ್ಯ ಸೇವೆ, ವೈದ್ಯರು-ಸಿಬ್ಬಂದಿಗಳ ನಿರ್ವಹಣೆ ಕುರಿತು ರೋಗಿಗಳು-ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆ ಒಳ ಆವರಣ, ವಾರ್ಡ್‌ಗಳ ಸ್ವಚ್ಛತೆ, ಶೌಚಗೃಹ ನಿರ್ವಹಣೆ, ರೋಗಿಗಳ ಆರೈಕೆ, ಕುಂದುಕೊರತೆ ಆಲಿಸಿದರು. ತಾಯಿ-ಮಗು ವಾರ್ಡ್‌ಗೆ ತೆರಳಿ ಶುಚಿತ್ವ ಹಾಗೂ ಸೇವೆ ನೀಡುತ್ತಿರುವ ಬಗ್ಗೆ ಪರಿಶೀಲಿಸಿದರು.

ತಾಲೂಕಿನ ಹೊರ ವಲಯದಲ್ಲಿ 25 ಕೋಟಿ ರೂ. ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ಶುದ್ಧ ಕುಡಿವ ನೀರು ಪೂರೈಕೆ, ಸೊಳ್ಳೆ ನಿಯಂತ್ರಣ, ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಲಭ್ಯಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.

ಟಿಎಚ್‌ಒ ಡಾ.ವೆಂಕಟೇಶ್, ಖಾದಿ ರಮೇಶ್, ಕಲ್ಲಹಟ್ಟಿ ಹರೀಶ್, ಆರ್.ನಾಗೇಂದ್ರನಾಯ್ಕ, ಪ್ರಕಾಶ್, ಜಿ.ದಾದಾಪೀರ್, ಪಿ.ಎಸ್.ಸಾದತ್ ಉಲ್ಲಾ ಇದ್ದರು.