ಕನಕಗಿರಿ ವೆಂಕಟಪತಿ ಬಾವಿಯನ್ನು ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು. ಪೌರಕಾರ್ಮಿಕರಾದ ಸಣ್ಣ ಹುಲಗಪ್ಪ, ಹುಸೇನಪ್ಪ, ಹುಲಿಯಪ್ಪ, ಹುಸೇನಿ, ತಿಮ್ಮಮ್ಮ, ಶಕುಂತಲಾ, ಪಾರ್ವತೆಮ್ಮ, ಯಮನೂರಪ್ಪ, ಕೃಷ್ಣ ಇತರರಿದ್ದರು. 
ಜಿಲ್ಲೆ

ಸ್ವಚ್ಛತೆಯಿಂದ ಪ್ರವಾಸಿಗರಿಗೆ ಅನುಕೂಲ

ರುದ್ರಪ್ಪ ವಾಲಿ

ಕನಕಗಿರಿ: ಒಂದು ದಿನ ಒಂದು ಗಂಟೆ ಒಂದಾಗಿ ಘೋಷ ವಾಕ್ಯದೊಂದಿಗೆ ಇಲ್ಲಿನ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರು ಗುರುವಾರ ಐತಿಹಾಸಿಕ ವೆಂಕಟಪತಿ ಬಾವಿಯನ್ನು ಶ್ರಮಾದಾನದ ಮೂಲಕ ಸ್ವಚ್ಛಗೊಳಿಸಿದರು.

ಪ್ರತಿ ನಿತ್ಯ ಸ್ವಚ್ಛತೆಯ ಮೂಲಕ ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ವೆಂಕಟಪತಿ ಬಾವಿಯನ್ನು ಪೌರ ಕಾರ್ಮಿಕ ಸಿಬ್ಬಂದಿ ಉತ್ಸುಕತೆಯಿಂದ ಸ್ವಚ್ಛಗೊಳಿಸಿದರು. ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ಸ್ಮಾರಕವು ಅಂದವಾಗಿ ಕಾಣಲಿದ್ದು, ಸ್ವಚ್ಛತೆಯಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಈ ಸ್ಮಾರಕವನ್ನು ವಿಶೇಷ ಕಾರ್ಯಕ್ರಮದಡಿ ಸ್ವಚ್ಛಗೊಳಿಸಲಾಗಿದೆ ಎಂದರು.

ಪ್ರತಿ ನಿತ್ಯ ನಾವುಗಳು ಪಟ್ಟಣವನ್ನು ಸ್ವಚ್ಛಗೊಳಿಸುತ್ತೇವೆ. ಆದರೆ, ವಿಶೇಷವಾಗಿ ಉತ್ಸುಕತೆಯಿಂದ ಬಾವಿ ಸ್ವಚ್ಛಗೊಳಿಸಿದ್ದು ಸಂತಸ ತಂದಿದೆ ಎಂದು ಪೌರ ಕಾರ್ಮಿಕರು ತಿಳಿಸಿದರು.