ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರು ಸ್ವಚ್ಛತೆಯೇ ಸೇವೆ ಸ್ವಚ್ಛತಾ ಅಭಿಯಾನವನ್ನು ಬುಧವಾರ ನಡೆಸಿದರು.
ಕಾಲೇಜಿನಿಂದ ಗ್ರಾಪಂವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಹರಡಿರುವ ಪ್ಲಾಸ್ಟಿಕ್ ಕಸ ಮತ್ತು ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಸಸಂಗ್ರಹಣಾ ಜಾಗದಲ್ಲಿ ಒಟ್ಟುಗೂಡಿಸಿದರು.
ನಂತರ ಸ್ವಾಭಾವ ಸ್ವಚ್ಛತೆ - ಸಂಸ್ಕಾರ ಸ್ವಚ್ಛತೆ , ಸ್ವಚ್ಛತೆ ಇರುವಲ್ಲಿ ಆರೋಗ್ಯ ಇದೆ. ಸ್ವಚ್ಛತೆಯೇ ಸೇವೆ ಮುಂತಾದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸಿ ಘೊಷಣೆ ೂಗಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ಉಪನ್ಯಾಸಕರು, ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.