ಜಿಲ್ಲೆ

ಎಕ್ಸೆಲ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ಸೌಮ್ಯ ಆರ್

ಬೆಳ್ತಂಗಡಿ: ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಎಕ್ಸೆಲ್ ಪಿಯು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ ಅಯೋಜಿಸಲಾಯಿತು.

ಎಕ್ಸೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಗಾಂಧೀಜಿಯವರ ಅಹಿಂಸಾ ತತ್ವ, ಶಾಂತಿ, ಸ್ವಚ್ಛತೆ, ಹಾಗೂ ನೈತಿಕತೆ ಕುರಿತಾದ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಲಾಲ್ ಬಹಾದೂರ್ ಶಾಸ್ತ್ರಿಯವರ ಸ್ವಾತಂತ್ರ್ಯ ಹೋರಾಟದ ಹಾದಿ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ನಂತರ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾಯನಕೆರೆಯಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ರಸ್ತೆಯ ಎರಡೂ ಬದಿಗಳನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು. ಗುರುವಾಯನಕೆರೆಯ ನಾಲ್ಕು ದಿಕ್ಕುಗಳ ಎರಡು ಬದಿಯ ಕಿಲೋ ಮೀಟರ್ ರಸ್ತೆ ಸ್ವಚ್ಛ ಮಾಡಿದರು.

ಅರಮಲೆ ಬೆಟ್ಟ ಕ್ಯಾಂಪಸ್‌ನ ಪ್ರಭಾರ ಪ್ರಾಚಾರ್ಯ ಡಾ. ಪ್ರಜ್ವಲ್, ಕ್ಯಾಂಪಸ್ ಮ್ಯಾನೇಜರ್, ಶಾಂತಿರಾಜ್ ಜೈನ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ, ವಿಭಾಗ ಮುಖ್ಯಸ್ಥ ಪ್ರಸನ್ನ, ಪ್ರಭಾಕರ್, ರವಿ, ಹಾಗೂ ಉಪನ್ಯಾಸಕರು, ಹಾಸ್ಟೆಲ್ ವಾರ್ಡನ್‌ಗಳು, ಮತ್ತು ಮೊದಲ ವರ್ಷದ ಪಿಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಮುನೀರ್ ಕಾರ್ಯಕ್ರಮ ನಿರ್ವಹಿಸಿದರು, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ ಸ್ವಾಗತಿಸಿದರು ಮತ್ತು ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ವಂದಿಸಿದರು.