ಜಿಲ್ಲೆ

ಹೆಜಮಾಡಿ ಕಡಲ ಕಿನಾರೆಯಲ್ಲಿ ಸ್ವಚ್ಛತೆ

Avinash R

ಮೂಲ್ಕಿ: ಭಾರತ್​ ಸ್ಕೌಟ್​ ಮತ್ತು ಗೈಡ್​ ರಾಜ್ಯ ಸಂಸ್ಥೆಯ ಸೂಚನೆಯಂತೆ, ಮೂಲ್ಕಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಯು ಗುರುಜ್ಯೋತಿ ಸ್ಕೌಟ್​ ಮತ್ತು ಗೈಡ್​, ರೋವರ್ಸ್​ ಮತ್ತು ರೇಂರ್ಜಸ್​ ಘಟಕಗಳು ಹಾಗೂ ಹೆಜಮಾಡಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಸಾಗರ್​ ಸುರಕ್ಷಿತ ಸಾಗರ್​ ಅಭಿಯಾನದಡಿಹೆಜಮಾಡಿ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು.

ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಸುವರ್ಣ ಹಾಗೂ ಹೆಜಮಾಡಿ ಗ್ರಾಮ ಪಂಚಾಯಿತಿಉಪಾಧ್ಯಕ್ಷ ಮೋಹನ್​ ಸುವರ್ಣ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಮೆಂಡನ್​, ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಮನೋಹರ್​, ಭಾರತ್​ ಸ್ಕೌಟ್​ ಮತ್ತು ಗೈಡ್​ ಮೂಲ್ಕಿ ಸ್ಥಳಿಯ ಸಂಸ್ಥೆಯ ಕೋಶಾಧಿಕಾರಿ ಗೀತಾ, ಸ್ಕೌಟ್​ ಲೀಡರ್​ಗಳಾದ ಪ್ರತಿಭಾ, ಭಾರತಿ, ಗೈಡ್​ ಕ್ಯಾಪ್ಟನ್​ ಸಾವಿತ್ರಿ, ರೋವರ್ಸ್​ ಸ್ಕೌಟ್​ ಲೀಡರ್​ ರಮೇಶ್​, ರೇಂರ್ಜಸ್​ ಲೀಡರ್​ ವಂದನಾ ಉಪಸ್ಥಿತರಿದ್ದರು.