Cleanliness and awareness program nelamangala 
ಜಿಲ್ಲೆ

ಎಲ್ಲರ ಸಹಕಾರದಿಂದ ರಾಮ ರಾಜ್ಯ ಕನಸು ನನಸು

ಶಿವರಾಜ.ಎಂ

ರೋಟರಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್ ಅನಿಸಿಕೆ

ಭಿನ್ನಮಂಗಲದಲ್ಲಿ ಸ್ವಚ್ಛತಾ ಕಾರ್ಯಕ್ರಮ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬರೂ ಕೈಜೋಡಿಸಿದರೆ ಗಾಂಧಿ ಅವರ ಸ್ವಚ್ಛ ಭಾರತ ಹಾಗೂ ರಾಮ ರಾಜ್ಯ ಕನಸನ್ನು ನನಸು ಮಾಡಬಹುದು ಎಂದು ರೋಟರಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಭಿನ್ನಮಂಗಲ ಉಪನೋಂದಣಾಧಿಕಾರಿ ಕಚೇರಿ ಸಮೀಪ ರೋಟರಿ ಸಂಸ್ಥೆ, ಇನ್ನರ್ ವ್ಹೀಲ್ ಸಂಸ್ಥೆ ಹಾಗೂ ಜ್ಞಾನಧಾಮ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸ್ವಚ್ಛತೆ ಸಮಸ್ಯೆಯೂ ಒಂದು. ಸ್ವಚ್ಛತೆ ಕಾಪಾಡಿಕೊಂಡಲ್ಲಿ ಆರೋಗ್ಯ ಸುಧಾರಣೆಯಾಗುವ ಜತೆಗೆ ಜನಜೀವನಮಟ್ಟವೂ ಸುಧಾರಣೆಯಾಗಲಿದೆ. ಸ್ವಚ್ಛ ಗಾಳಿ, ಪರಿಸರ, ಆಹಾರ ನೀರನ್ನು ಅಪೇಕ್ಷಿಸುತ್ತಿರುವ ಮನುಷ್ಯರಲ್ಲಿ ಸ್ವಚ್ಛತೆ ಅರಿವಿಲ್ಲದಿರುವುದು ಬೇಸರದ ಸಂಗತಿ ಎಂದರು. ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ದೂರುವುದು ಬಿಟ್ಟು, ಸ್ವಯಂಪ್ರೇರಿತರಾಗಿ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ವಿದ್ಯಾವಂತ ಯುವಜನತೆ ಮನಸ್ಸು ಮಾಡಿ, ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸಿದ್ದಲ್ಲಿ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ಸಾರ್ಥಕವಾಗಲಿದೆ ಎಂದರು.
ಜ್ಞಾನಧಾಮ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ರೇಖಾ ಮಾತನಾಡಿ, ವಿದ್ಯಾರ್ಥಿಗಳಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜಕ್ಕೆ ನಾವು ಮಾಡುವ ಸಣ್ಣಸಣ್ಣ ಸೇವೆಗಳು ದೇಶವನ್ನು ಪ್ರಗತಿಯತ್ತ ಸಾಗಿಸಲು ಸಹಕಾರಿಯಾಗಲಿವೆ ಎಂದರು.
ಉಪನೋಂದಣಾಧಿಕಾರಿ ಕಚೇರಿಯಿಂದ ವೀವರ್ಸ್‌ ಕಾಲನಿ ಮಾರ್ಗವಾಗಿ ನಗರ ಪೊಲೀಸ್ ಠಾಣೆ ಆವರಣದವರೆಗೂ ನಗರದ ಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ನಗರಸಭೆೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಜೋಡಿಸಿದರು.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಚಿಕ್ಕನರಸಿಂಹಯ್ಯ, ನಗರಸಭೆ ಪೌರಾಯುಕ್ತ ಲೋಹಿತ್, ಆರೋಗ್ಯ ನಿರೀಕ್ಷಕಿ ಬಿಜಿ, ಮಮತಾ, ರವಿಕುಮಾರ್, ರೋಟರಿ ಸಂಸ್ಥೆ ಕಾರ್ಯದರ್ಶಿ ಶಿವರಾಮಯ್ಯ, ನಿರ್ದೇಶಕರಾದ ಗಂಗರಾಜು, ಎನ್.ಜಿ.ನಾಗರಾಜು, ಬಿ.ಟಿ.ಕೃಷ್ಣಮೂರ್ತಿ, ಚಂದ್ರಕುಮಾರ್, ಮಂಜುನಾಥ್, ಸಣ್ಣಪ್ಪ, ವಕೀಲ ಎನ್.ಪಿ.ರಘುನಾಥ್, ಕಾಲೇಜು ಪ್ರಾಂಶುಪಾಲ ಶಹಬಾಜ್‌ಅಹಮದ್, ಉಪಪ್ರಾಂಶುಪಾಲ ದಕ್ಷಿಣಾಮೂರ್ತಿ, ಉಪನ್ಯಾಸಕರಾದ ವೆಂಕಟೇಶ್, ವಸಂತ್‌ಕುಮಾರ್, ಪವನ್ ಕುಮಾರ್, ರೋಟ್ರಾಕ್ಟ್ ಕ್ಲಬ್ ಸದಸ್ಯರಾದ ಜಯಂತ್, ಯೋಗೀಶ್, ಚಿರಂಜೀವ, ಚಿಗಾರ್‌ಶೆಟ್ಟಿ, ಸಂದೀಪ್‌ಕುಮಾರ್ ಮತ್ತಿತರರಿದ್ದರು.