ಗದಗ ರಾಜೀವಗಾಂಧಿ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಜರುಗಿದ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದಲ್ಲಿ ವೀಣಾ ತಿರ್ಲಾಪೂರ ಮಾತನಾಡಿದರು. ಚಂದ್ರಮೌಳಿ ಜಾಲಿ, ಶ್ರೀಧರ ಸುಲ್ತಾನಪುರ, ಎಸ್​.ಎಂ. ರಡ್ಡೇರ ಇದ್ದರು. 
ಜಿಲ್ಲೆ

ವಿದ್ಯಾಥಿರ್ಗಳು ಸದೃಢ ಆರೋಗ್ಯ ಹೊಂದಬೇಕು: ವೀಣಾ ತಿರ್ಲಾಪೂರ

Gadag - Shivanand Hiremath

ಗದಗ:
ಆರೋಗ್ಯ ಭಾಗ್ಯದ ಸಮೃದ್ಧಿಗಾಗಿ ನಾವೆಲ್ಲರು ಸದೃಢ ಆರೋಗ್ಯ ಹೊಂದಬೇಕೆಂದು ಉಪನ್ಯಾಸಕಿ ವೀಣಾ ತಿರ್ಲಾಪೂರ ಹೇಳಿದರು.
ರೋಟರಿ ಕ್ಲಬ್​ ವತಿಯಿಂದ ರಾಜೀವಗಾಂಧಿ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಗುರುವಾರ ಜರುಗಿದ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಾತ್ಯತೆ ಮೂಲಕ ಕೈತೊಳೆಯುವ ವಿಧಾನ ಕುರಿತು ಮಾತನಾಡಿದ ಅವರು, ವಿದ್ಯಾಥಿರ್ಗಳು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಕೈಕಾಲು ಸ್ವಚ್ಛವಾಗಿಟ್ಟುಕೊಂಡು ಓದಿನಲ್ಲಿ ಮುಂದೆವರೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಚಂದ್ರಮೌಳಿ ಜಾಲಿ ಮಾತನಾಡಿ ಮಕ್ಕಳು ಪ್ರತಿ ದಿನ ಊಟಕ್ಕೂ ಮೊದಲು ಕೈತೊಳೆದು ಕೊಳ್ಳಬೇಕು. ಇದರಿಂದ ರೋಗ ರುಜಿನ ತಡೆಗಟ್ಟಬಹುದು ಎಂದರು.
ಉಜ್ಮಾ ಹುಡೇದಮನಿ, ಆಸಾನ ಗಬ್ಬೂರ, ಎಸ್​, ಎಂ. ರಡ್ಡೇರ, ಎಚ್​. ಎಸ್​. ಶೇಖರ, ಎನ್​. ಹೆಚ್​. ಜಕ್ಕಲಿ, ಕೆ.ಎ. ದಾವಲಖಾನ. ಗೀತಾ ಕೋರಿ, ಕೆ. ಎಸ್​. ಬೇಲೇರಿ ಹಲವರು ಇದ್ದರು.