ಮೈಸೂರು: ನಗರದ ಚಾಮುಂಡಿಬೆಟ್ಟದಲ್ಲಿ ಜರುಗುವ ಆಷಾಢ ಮಾಸದ ಶುಕ್ರವಾರ ವಿಶೇಷ ಪೂಜೆ ಅಂಗವಾಗಿ ಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಲಾಯಿತು.
ಸುತ್ತೂರು ಮಠ ಸಮೀಪದಲ್ಲಿರುವ ಚಾಮುಂಡಿ ಪಾದದ ವೆುಟ್ಟಿಲುಗಳ ಬಳಿ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಆಯೋಜಿಸಿದ್ದ ಶ್ರಮದಾನ ಕಾರ್ಯಕ್ರಮವನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೆಟ್ಟಿಲುಗಳನ್ನು ಪೊರಕೆಯಿಂದ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.
ಸಿ.ನಾರಾಯಣಗೌಡ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆ ಬಹುಮುಖ್ಯ ಅಂಶವಾಗಿದೆ. ಈ ದಿಸೆಯಲ್ಲಿ ನಲ್ಲಿ ಕಾರ್ಮಿಕರ ಸಂಘಟನೆಯು ಹಲವಾರು ವರ್ಷಗಳಿಂದ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ, ನಗರಗಳಲ್ಲಿ ಸ್ವಚ್ಛತೆಯ ಜವಾಬ್ದಾರಿ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಹಾಗೂ ಎಲ್ಲ ನಾಗರಿಕರಿಗೂ ಸೇರಿದ್ದು ಎಂದು ಹೇಳಿದರು.
ಸಂಘಟನೆ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಸುರೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಂಟಿ ಕಾರ್ಯದರ್ಶಿ ಪಳನಿ ಖಜಾಂಚಿ ಪ್ರಕಾಶ್, ನಿರ್ದೇಶಕರಾದ ಅನಿಲ್ಕುಮಾರ್, ಚಂದ್ರೇಗೌಡ, ಕುಮಾರ್, ಯೋಗೇಶ್, ಸಂತೋಷ್‌ಕುಮಾರ್, ರುದ್ರಸ್ವಾಮಿ, ಸುರೇಶ್, ಮಹಮ್ಮದ್ ಜಫಿರ್‌ಹುಸೇನ್, ಶಿವರಾಜು, ಹೆಬ್ಬಾಳ ಯೋಗೇಶ ಇತರರು ಇದ್ದರು.