ಜಿಲ್ಲೆ

ಸ್ವಚ್ಛತೆಗಾಗಿ ಆ್ಯಪ್ ಬಿಡುಗಡೆ, ಮಾಹಿತಿ ರವಾನಿಸಿದಲ್ಲಿ 72 ಗಂಟೆಯೊಳಗೆ ಕ್ರಮ

Kolar

ಕೋಲಾರ: ನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ನಗರಸಭೆಯಿಂದ ಅವಿಷ್ಕಾರಗೊಳಿಸಿರುವ ಸ್ವಚ್ಛತಾ ಆ್ಯಪ್‌ಗೆ ಸಾರ್ವಜನಿಕರು ಸುತ್ತ ಮುತ್ತಲಿನ ಪರಿಸರಕ್ಕೆ ಸಂಬಂಧಿಸಿದ ಫೋಟೋ ಮತ್ತು ಮಾಹಿತಿ ರವಾನಿಸಿದಲ್ಲಿ 72 ಗಂಟೆಯೊಳಗೆ ಕ್ರಮಗೊಳ್ಳಲಾಗುತ್ತದೆ ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಡಿಸಿ ಜೆ.ಮಂಜುನಾಥ್ ಹೇಳಿದರು.

ನಗರದ ಜಿಪಂನಲ್ಲಿ ಶನಿವಾರ ಸ್ವಚ್ಛ ಸರ್ವೆಕ್ಷಣ್ ಅಡಿಯಲ್ಲಿ ರೂಪಿಸಿರುವ ಹೊಸ ಆ್ಯಪ್ ಮತ್ತು ಪ್ರಚಾರ ಸಾಮಗ್ರಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಕಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋಧಮ್ಮ, ನಗರಸಭೆ ಆಯುಕ್ತ ಶ್ರೀಕಾಂತ್, ಆರೋಗ್ಯ ನಿರೀಕ್ಷಿಯರಾದ ದೀಪಾ ಪ್ರಸಾದ್, ಮರಿಯಾ ಉಪಸ್ಥಿತರಿದ್ದರು.