ಮಡಿಕೇರಿ:
ಚೆಂಬು ಗ್ರಾಮದ ಭಗವಾನ್ ಸಂಘದ ವತಿಯಿಂದ ಕೊಡಗು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸೂಚನಾ ಫಲಕಗಳನ್ನು ಸ್ವಚ್ಚಗೊಳಿಸುವ ಶ್ರಮದಾನ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಪಾಜೆ ಹೋಬಳಿಯ ಕಲ್ಲುಗುಂಡಿ, ಕಡೆಪಾಲದಿಂದ ದೇವರಕೊಲ್ಲಿಯ ಗಾರೆಮುರಿ ವರೆಗೆ ರಸ್ತೆಯ ಅಂಚಿನಲ್ಲಿರುವ ಹೆದ್ದಾರಿ ಪ್ರಾದಿಕಾರದ ಸೂಚನಾ ಫಲಕಗಳು, ಶಾಲಾ - ಕಾಲೇಜು ,ದೇವಸ್ಥಾನಗಳ ನಾಮಫಲಕಗಳು, ಸ್ವಾಗತ ಕಮಾನುಗಳು ಮತ್ತು ಬಸ್ಸು ತಂಗುದಾಣಗಳನ್ನು ಯಂತ್ರಗಳನ್ನು ಬಳಸಿ ಶುಚಿಗೊಳಿಸಲಾಯಿತು. ಸ್ವಚ್ಛತಾ ಅಭಿಯಾನಕ್ಕೆ ಕಲ್ಲುಗುಂಡಿ ವರ್ತಕರ ಸಂಘದ ಅದ್ಯಕ್ಷ ಯು.ಬಿ. ಚಕ್ರಪಾಣಿ ಚಾಲನೆ ನೀಡಿದರು. ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಸಂಘದ ಗೌರವಾದ್ಯಕ್ಷ ಅನಂತ್ ಊರುಬೈಲು, ಅಧ್ಯಕ್ಷ ಶರತ್ ಕಾಸ್ಪಾಡಿ ನೇತೃತ್ವದಲ್ಲಿ ಶ್ರಮದಾನ ನಡೆಯಿತು.