ಜಿಲ್ಲೆ

ಶುದ್ಧ ನೀರು ಆರೋಗ್ಯಕ್ಕೆ ಸಹಕಾರಿ

Davangere - Desk - Mahesh Babu E

ಚಿತ್ರದುರ್ಗ: ಶುದ್ಧ ನೀರು, ಸ್ವಚ್ಛತೆಯಿಂದ ಆರೋಗ್ಯ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಜನರು ಹೆಚ್ಚು ಆದ್ಯತೆ ನೀಡಬೇಕು ಎಂದು ಜಿಎಸ್‌ಎಸ್ ಮೈಕ್ರೋ ಫೈನಾಸ್ಸ್ ಲಿಮಿಟೆಡ್ ರಾಜ್ಯ ಮುಖ್ಯಸ್ಥ ರಘು ಹೇಳಿದರು.

ಜಿಎಸ್‌ಎಸ್ ಮೈಕ್ರೋ ಫೈನಾಸ್ಸ್ ಲಿಮಿಟೆಡ್‌ನಿಂದ ಸೋಮವಾರ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ 200 ಕುಟುಂಬಗಳಿಗೂ ತಲಾ 2,700 ರೂ. ವೆಚ್ಚದ ನೀರು ಶುದ್ಧೀಕರಣ ಯಂತ್ರ ವಿತರಿಸಿದ ಸಂದರ್ಭ ಮಾತನಾಡಿದರು.

ಸಿಎಸ್‌ಆರ್‌ನ ಮನೋಜ್, ಪ್ರಶಾಂತ್, ಪತ್ರಕರ್ತ ಬಸವರಾಜು, ವಿಭಾಗದ ವ್ಯವಸ್ಥಾಪಕ ಶಿವಲಿಂಗಶೆಟ್ಟಿ, ಹಿರಿಯ ವ್ಯವಸ್ಥಾಪಕರಾದ ಯಲ್ಲಪ್ಪ, ಗಿರಿಧರ್, ಚಿತ್ರದುರ್ಗ ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಇತರರಿದ್ದರು.