ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ಘನ ತ್ಯಾಜ್ಯ ನಿರ್ವಹಣೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಹಾಗೂ ಮೇಲುಸ್ತುವಾರಿ ಸಮಿತಿ ತರಬೇತಿ ಕಾರ್ಯಾಗಾರವನ್ನು ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಗುರುವಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಹನುಮಂತಗೌಡ ಪೊ.ಪಾಟೀಲ್, ಜಿಪಂ ಎಸ್‌ಬಿಎಂ ಸಮಾಲೋಚಕರಾದ ರಾಮಣ್ಣ, ಬಸಮ್ಮ ಇತರರಿದ್ದರು. 
ಜಿಲ್ಲೆ

ಸ್ವಚ್ಛ ಪರಿಸರಕ್ಕೆ ಕಸವಿಲೇವಾರಿ ಅಗತ್ಯ

ರುದ್ರಪ್ಪ ವಾಲಿ

ಗಂಗಾವತಿ: ಮನೆಯ ಕಸವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕ ಹಾಗೂ ಸಂಪನ್ಮೂಲ ವ್ಯಕ್ತಿ ಹನುಮಂತಗೌಡ ಪೊಲೀಸ್ ಪಾಟೀಲ್ ಸಲಹೆ ನೀಡಿದರು.

ತರಬೇತಿ ಕಾರ್ಯಾಗಾರ

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕು ಮಟ್ಟದ ಘನ ತ್ಯಾಜ್ಯ ನಿರ್ವಹಣೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಹಾಗೂ ಮೇಲುಸ್ತುವಾರಿ ಸಮಿತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ಆದ್ಯತೆಯಾಗಲಿ
ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಗ್ರಾಪಂ ಮತ್ತು ಮೇಲುಸ್ತುವಾರಿ ಸಮಿತಿ ಮೇಲಿದ್ದು, ಸ್ವಚ್ಛ ಸಂಕೀರ್ಣ ಘಟಕದ ಸರಿಯಾದ ನಿರ್ವಹಣೆಯತ್ತ ಗಮನಹರಿಸಬೇಕು. ವಿಲೇವಾರಿಗೆ ವಾಹನದ ವ್ಯವಸ್ಥೆ ಜತೆಗೆ ವಿಂಗಡಣೆ ಬಗ್ಗೆ ಮಾರ್ಗದರ್ಶನ ನೀಡಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕಸವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.


ಕಾರ್ಯಾಗಾರ ಉದ್ಘಾಟಿಸಿದ ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಮಾತನಾಡಿ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ತ್ಯಾಜ್ಯ ವಿಲೇವಾರಿ ಪ್ರಮುಖವಾಗಿದ್ದು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.


ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಹಾಗೂ ಸ್ವಚ್ಛ ವಾಹಿನಿಗಳ ಸದ್ಬಳಕೆ ಕುರಿತು ಜಿಪಂ ಎಸ್‌ಬಿಎಂ ಸಮಾಲೋಚಕರಾದ ರಾಮಣ್ಣ, ಬಸಮ್ಮ ಮಾಹಿತಿ ನೀಡಿದರು.ಕೊಪ್ಪಳ ತಾಪಂ ಸಹಾಯಕ ನಿರ್ದೇಶಕ ಎಚ್.ಮಹೇಶ, ಕನಕಗಿರಿ ತಾಪಂ ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ ಸೇರಿ ತ್ರಿವಳಿ ತಾಲೂಕಿನ ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ವಿಷಯ ನಿರ್ವಾಹಕರು ಮತ್ತು ಸ್ವಸಹಾಯ ಸಂಘದ ಸದಸ್ಯರಿದ್ದರು.