ಹಲವಾಗಲಿಯಲ್ಲಿ ಸಾಂಕ್ರಾಮಿಕ ರೋಗಗಳ ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಕಾಶಪ್ಪ, ವೆಂಕರಡ್ಡಿ, ಸಂತೋಷ, ಶಿವಕುಮಾರ, ಪ್ರತಿಭಾ, ರೇಷ್ಮಾ, ಶೋಭಾ ಇತರರಿದ್ದರು. 
ಜಿಲ್ಲೆ

ಸ್ವಚ್ಛ ಪರಿಸರದಿಂದ ರೋಗಗಳು ದೂರು

Kopala - Desk - Eraveni

ಅಳವಂಡಿ: ಸೊಳ್ಳೆಗಳ ನಿಯಂತ್ರಣದಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ. ಜ್ವರ ಯಾವುದೇ ಇರಲಿ ಬೇಗ ರಕ್ತ ಪರೀಕ್ಷೆ ಮಾಡಿಸಿಕೊಂಡು ಅವಶ್ಯಕತೆ ಇದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹೇಳಿದರು.

ಸಮೀಪದ ಹಲವಾಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಗ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರವಹಿಸಿ. ಈ ಬಗ್ಗೆ ಜನಪ್ರತಿನಿಧಿಗಳು, ಶಿಕ್ಷಕರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮುಖ್ಯಶಿಕ್ಷಕ ವೆಂಕರಡ್ಡಿ ಇಮ್ಮಡಿ, ಆರೋಗ್ಯ ಇಲಾಖೆ ಸುರಕ್ಷತಾಧಿಕಾರಿ ಪ್ರತಿಭಾ ಪ್ರಮುಖರಾದ ಸಂತೋಷ ಹಳ್ಳಿ, ಶಿವಕುಮಾರ, ರೇಷ್ಮಾ, ಶೋಭಾ ಶಿಕ್ಷಕರಾದ ವೀರಯ್ಯ, ಮಂಜುನಾಥ, ದೇವರಾಜ, ಚನ್ನಮ್ಮ, ಅಶ್ವಿನಿ, ಕೃಷ್ಣಪ್ಪ ಇತರರಿದ್ದರು.