ಇಳಕಲ್ಲದ ಕಂಠಿ ಸರ್ಕಲ್‌ದಲ್ಲಿ ಸ್ವಚ್ಛ ವಿಧಾನಸಭೆ ಅಭಿಯಾನವನ್ನು ನಾಗರಾಜ ಕಲಕಟುಗರ ನಡೆಸಿದರು. 
ಜಿಲ್ಲೆ

ಇಳಕಲ್ಲನಲ್ಲಿ ಸ್ವಚ್ಛ ವಿಧಾನಸಭೆ ಅಭಿಯಾನ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ(ಗ್ರಾ): ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಶಾಸಕರು ಆಯ್ಕೆಯಾಗಬೇಕೆಂದು ಏಕಾಂಗಿಯಾಗಿ ಜಾಗೃತಿ ಅಭಿಯಾನವನ್ನು ಪಟ್ಟಣದ ಕಂಠಿ ಸರ್ಕಲ್‌ನಲ್ಲಿ ನಾಗರಾಜ ಕಲಕಟುಗರ ನಡೆಸಿದರು.

ರಾಜ್ಯಾದ್ಯಂತ ಪಾದಯಾತ್ರೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಅವರು, ಈಗಾಗಲೇ ಹತ್ತು ಜಿಲ್ಲೆಗಳಲ್ಲಿ ಸಂಚರಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಆಗಮಿಸಿದ್ದಾರೆ.

ನಗರದ ಕಂಠಿ ಸರ್ಕಲ್‌ನಲ್ಲಿ ಜನರೊಂದಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಹಣ, ಆಸೆ, ಅಮಿಷಗಳಿಗೆ ಒಳಗಾಗದೆ ನಿರ್ಭಯವಾಗಿ ಭ್ರಷ್ಟಾಚಾರ ರಹಿತ ಶುದ್ಧವಾಗಿರುವ ವ್ಯಕ್ತಿಗಳಿಗೆ ಮತವನ್ನು ನೀಡಿ ಆಯ್ಕೆ ಮಾಡಿದಾಗ ಉತ್ತಮ ಆಡಳಿತ ನಡೆಸಲು ಸಾಧ್ಯ. ಭ್ರಷ್ಟಾಚಾರ, ಕಳಂಕಿತರ, ಕೋಮುವಾದಿಗಳಿಗೆ, ವಂಶಪಾರಂಪರ್ಯವಾಗಿ ಇರುವವರಿಗೆ ತಿರಸ್ಕರಿಸಬೇಕೆಂದು ಕರೆ ನೀಡಿದರು.