ಮಡಿಕೇರಿ:
ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮಡಿಕೇರಿಗೆ ನಂ.1 ಸ್ಥಾನ ಸಿಕ್ಕಿದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯ ಗುರುವಾರದ (ನ.14) ಮಾಹಿತಿ ಪ್ರಕಾರ ಮಂಜಿನ ನಗರಿ ಪ್ರಥಮ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ರಾಜ್ಯದ ಗದಗ ಕೂಡ ಸ್ಥಾನ ಪಡೆದುಕೊಂಡಿದ್ದು, 8ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಡಿಕೇರಿ 5ನೇ ಸ್ಥಾನದಲ್ಲಿತ್ತು.
ಕೊಡಗಿನ ಹಸಿರು ಪರಿಸರ, ಪರಿಶುದ್ಧ ಗಾಳಿ, ಝುಳು ಝುಳು ನೀರು ಪ್ರವಾಸಿಗರಿಗೆ ಅಚ್ಚುಮೆಚ್ಚು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇಂತಹ ವಾತಾವರಣ ಕಂಡು ಬರುತ್ತದೆ. ಆದರೆ ನಗರ ಪ್ರದೇಶ, ಪ್ರವಾಸಿತಾಣಗಳಲ್ಲಿ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ ದೇಶದ 10 ಪರಿಶುದ್ಧ ಗಾಳಿ ಇರುವ ಪ್ರದೇಶದಲ್ಲಿ ಮಡಿಕೇರಿ ಮೊದಲ ಸ್ಥಾನ ಪಡೆದುಕೊಂಡಿರುವುದು ಸ್ಥಳೀಯರಿಗೆ ಖುಷಿ ಕೊಟ್ಟಿದೆ.
ಶುದ್ಧಗಾಳಿ ಹೊಂದಿರುವ ದೇಶದ ಪ್ರಥಮ ಹತ್ತು ಸ್ಥಳಗಳಲ್ಲಿ ಮಡಿಕೇರಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನಗಳನ್ನು ಕ್ರಮವಾಗಿ ಪಾಲ್ಕಲೈಪೆರೂರ್, ಕರೂರು, ತಿರುನೆಲ್‌ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತ್‌ಕುಡಿ ಹಾಗೂ ಪುದುಚೆರಿ ಪಡೆದುಕೊಂಡಿದೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಪ್ರಮಾಣ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ, ಪಾಲ್ಕಲೈಪೆರೂರ್ 17, ಕರೂರು 22, ತಿರುನೆಲ್‌ವೇಲಿ 23, ತಿರುಪತಿ 24, ಊಟಿ 26, ವೆಲ್ಲೂರ್ 26, ರಾಣಿಪೇಟ್ 26, ಗದU 32À, ತೂತ್‌ಕುಡಿ 32 ಹಾಗೂ ಪುದುಚೆರಿಯಲ್ಲಿ 34 ಆಗಿದೆ. ಅತಿ ಹೆಚ್ಚು ವಾಯು ಮಾಲಿನ್ಯದಿಂದ ಸಮಸ್ಯೆ ಎದುರಿಸುತ್ತಿರುವ ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಕ 424 ರಷ್ಟು ದಾಖಲಾಗಿದೆ.
ಮಡಿಕೇರಿಯಲ್ಲಿ ಗಾಳಿಯಲ್ಲಿರುವ ಮಾಲಿನ್ಯ ಪ್ರಮಾಣ ಆಕ್ಟೋಬರ್ 2021ರಿಂದ ಸೆಪ್ಟೆಂಬರ್ 2022ರ ತನಕ 20.7 ರಷ್ಟಿತ್ತು. 2022 ಅಕ್ಟೋಬರ್‌ನಿಂದ 2023ರ ಸೆಪ್ಟೆಂಬರ್ ಅವಧಿಯಲ್ಲಿ ಇದು 18.1ಕ್ಕೆ ಇಳಿಕೆ ಆಗುವ ಮೂಲಕ ಶೇ. 12.4ರಷ್ಟು ಪ್ರಮಾಣದಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ದೇಶದಲ್ಲೇ ಗಾಳಿಯ ಗುಣಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಮಿಜೋರಾಂನ ಐಜ್ವಾಲ್‌ನಲ್ಲಿ ಆಕ್ಟೋಬರ್ 2021ರಿಂದ ಸೆಪ್ಟೆಂಬರ್ 2022ರ ತನಕ ಮಾಲಿನ್ಯ ಪ್ರಮಾಣ 8ರಷ್ಟು ಇದ್ದಿದ್ದು, 2022 ಅಕ್ಟೋಬರ್‌ನಿಂದ 2023ರ ಸೆಪ್ಟೆಂಬರ್ ಅವಧಿಯಲ್ಲಿ 11.1 ಆಗಿತ್ತು.
ವಾಯು ಗುಣಮಟ್ಟ ಅಳೆಯಲು ಎಕ್ಯೂಐ ಸೂಚಕ ಬಳಸಲಾಗುತ್ತದೆ. ಮನುಷ್ಯರ ಆರೋಗ್ಯ ಮತ್ತು ವಾತಾವರಣದ ಮೇಲೆ ಉಂಟಾಗುವ ವಾಯುಮಾಲಿನ್ಯದ ಪರಿಣಾಮಗಳ ಬಗ್ಗೆ ಈ ಸೂಚಕದಿಂದ ತಿಳಿಯಬಹುದು. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೆöÊಡ್ ಕಾರ್ಬನ್ ಮಾನಾಕ್ಸೆöÊಡ್ ಸಲರ್ ಡೈ ಆಕ್ಸೆöÊಡ್ ಹಾಗೂ ಸಲರ್ ಸಂಯುಕ್ತಗಳAತಹ ಮಾಲಿನ್ಯಗಳ ಬಗ್ಗೆ ಎಕ್ಯೂಐ ಸೂಚ್ಯಂಕದಿAದ ಮಾಹಿತಿ ಪಡೆಯಬಹದು. ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಲಿನ್ಯ ಮಾಪನಾ ಕೇಂದ್ರ ಇದೆ. ಗಾಳಿಯಲ್ಲಿನ ಪ್ರತಿP್ಷÀಣದ ಬದಲಾವಣೆಗಳು ಇಲ್ಲಿ ದಾಖಲಾಗುತ್ತದೆ. ಇಲ್ಲಿಯ ವಿವರಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ P್ಷÀಣ P್ಷÀಣಕ್ಕೂ ಸಿಗುತ್ತದೆ. ಜೊತೆಗೆ ದೈನಂದಿನ ವಿವರಗಳೂ ಲಭ್ಯ. ವಾಯುವಿನ ಗುಣಮಟ್ಟ, ಸೇರಿಕೊಂಡಿರುವ ರಾಸಾಯನಿಕ ಅಂಶಗಳು ಮತ್ತಿತರ ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಇರುತ್ತದೆ.
ಭೂಲೋಕದ ಸ್ವರ್ಗ ಎಂಬುದು ಈ ಮೂಲಕ ಸಾಬೀತಾದಂತಿದೆ. ಉತ್ತಮ ಆರೋಗ್ಯಕ್ಕೆ ಶುದ್ಧಗಾಳಿ, ಶುದ್ಧ ನೀರು, ಕಶ್ಮಲ ರಹಿತ ವಾತಾವರಣ ಎಂಬುದನ್ನು ಚಿಕ್ಕ ಜಿಲ್ಲೆ ಕೊಡಗು ತನ್ನದಾಗಿಸಿಕೊಂಡಿರುವುದು ಸಂತಸದ ವಿಚಾರ. ಇದನ್ನು ಉಳಿಸಿಕೊಳ್ಳಲು ನಮ್ಮ ಪ್ರಯತ್ನ ಮತ್ತು ಜವಾಬ್ದಾರಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಶುದ್ಧ ಪರಿಸರ, ಶುದ್ಧನೀರು, ಶುದ್ಧಗಾಳಿ ಮತ್ತು ಉತ್ತಮ ಆರೋಗ್ಯ ಇದುವೇ ನಮ್ಮ ಶ್ರೀಮಂತಿಕೆ. ಅಂದಿಗೂ, ಇಂದಿಗೂ, ಮುಂದಿಗೂ, ಎಂದೆAದಿಗೂ ಎನ್ನುವಂತಾಗಬೇಕು.
ಗೀತಾಗಿರೀಶ್, ಯೋಗ ತರಬೇತುದಾರ, ಮಡಿಕೇರಿ
ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮಡಿಕೇರಿಗೆ ನಂ.1 ಸ್ಥಾನ ಸಿಕ್ಕಿರುವುದು ಖುಷಿಯ ವಿಷಯ. ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಕ 424 ರಷ್ಟು ದಾಖಲಾಗಿದ್ದು, ಮಡಿಕೇರಿಯಲ್ಲಿ ಈ ಪ್ರಮಾಣ ಶೇ. 10ರಷ್ಟು ಮಾತ್ರ ಇರುವುದರಿಂದ ದೆಹಲಿಯಲ್ಲಿ ಆಗುತ್ತಿರುವ ಪರಿಣಾಮ ಊಹಿಸಬಹುದು. ಮಡಿಕೇರಿ ಗಾಳಿಯ ಗುಣಮಟ್ಟ ಹೀಗೆಯೇ ಉಳಿಸಿಕೊಳ್ಳುವುದರಲ್ಲಿ ಎಲ್ಲರ ಜವಾಬ್ದಾರಿಯೂ ಇದೆ.
ಟಿ.ಜಿ. ಪ್ರೇಮಕುಮಾರ್, ರಾಜ್ಯ ಪರಿಸರ ಪುರಸ್ಕೃತ ಶಿಕ್ಷಕ