ಜಿಲ್ಲೆ

ಪ್ರಚಲಿತ ಘಟನೆಗಳ ಬಗ್ಗೆ ತಿಳಿದಿರಲಿ

Chitradurga - Desk - Suresh lamani

ಹರಿಹರ: ಪ್ರಚಲಿತ ಘಟನೆಗಳನ್ನು ಮಕ್ಕಳು ಅರಿತಾಗ ಮಾತ್ರ ರ್ತಾಕ ಶಕ್ತಿ ವೃದ್ಧಿಯಾಗಿ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯ ಎಂದು ಕ್ವಿಜ್ ಮಾಸ್ಟರ್ ಪಿ.ಕೆ. ಪ್ರಕಾಶ್​ರಾವ್ ಹೇಳಿದರು.

ಸಮೀಪದ ಕುಮಾರಪಟ್ಟಣಂನ ಅಮೃತ ವರ್ಷಿಣಿ ಶಾಲೆಯಲ್ಲಿ ಗುರುವಾರ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ತರಗತಿವಾರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಸಾಮಾಜಿಕ, ಸೂಕ್ಷ್ಮ ರ್ತಾಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆಗಳನ್ನು ಹೆಚ್ಚಿಸಲು ದೈನಂದಿನ ನಡೆಯುವ ಘಟನೆಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದಲ್ಲಿ ಮಕ್ಕಳ ಕೌಶಲ ಅಭಿವೃದ್ಧಿಯಾಗುತ್ತದೆ ಎಂದರು.

ದಿನನಿತ್ಯ ಮಾಧ್ಯಮ ಅಥವಾ ದಿನ ಪತ್ರಿಕೆಗಳಲ್ಲಿ ಬರುವ ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಅಭ್ಯಾಸದ ಗುಣ ಬೆಳಸಲು ಸಾಧ್ಯ ಎಂದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಟ್ಟು 64 ವಿದ್ಯಾರ್ಥಿಗಳು ಭಾಗವಹಿಸಿದ್ದರು. 6 ಸುತ್ತಿನ 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು.