ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ಅನುತ್ತೀರ್ಣರಿಗೆ ನಡೆಸುವ ಪರೀಕ್ಷೆಗೆ ಹಾಜರಾಗುವವರ ಅನುಕೂಲಕ್ಕಾಗಿ ಕುವೆಂಪುನಗರದಲ್ಲಿನ ರತ್ನ ವಾಣಿಜ್ಯ ನಿರ್ವಹಣೆ ಕಾಲೇಜು ವತಿಯಿಂದ ತರಗತಿ ಆಯೋಜಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದರು.
ಆ.7ರಂದು ತರಗತಿ ಆರಂಭವಾಗಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಜರಾಗಬಹುದಾಗಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳಲ್ಲದೆ ಕನ್ನಡ, ಇಂಗ್ಲಿಷ್ ಭಾಷೆಯ ತರಗತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ.9886654463 ಸಂಪರ್ಕಿಸಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಂಶುಪಾಲರಾದ ಎಂ.ಜೆ.ದೀಪಾ, ಬಸವರಾಜಪ್ಪ, ಅಮರ್‌ನಾಥ್, ಡಾ.ನಾಗೇಶ್ ಇದ್ದರು.