ಬಾಗಲಕೋಟೆ: ಪರೀಕ್ಷೆ ಬರೆಯುವ ವೇಳೆ ಹೃದಯಾಘಾತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯದಲ್ಲೆ ಸಾವನ್ನಪ್ಪಿರುವುದು ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಹೈಸ್ಕೂಲ್ ನ ರಾಹುಲ್ ವಿಠ್ಠಲ ಕೋಲಕಾರ(15) ಮೃತ ದುರ್ದೈವಿ ಬಾಲಕ.
ಬುದ್ದಿಮಾಂದ್ಯನಾಗಿದ್ದ ರಾಹುಲ್ 9ನೇ ತರಗತಿಯಲ್ಲಿ ಓದುತ್ತಿದ್ದ. ಸದ್ಯ ಅರ್ಧವಾರ್ಷಿಕ ಪರೀಕ್ಷೆ ನಡೆದಿದ್ದು, ಶುಕ್ರವಾರ ಪರೀಕ್ಷೆ ಬರೆಯುವ ವೇಳೆ ಹೃದಯಾಘಾತವಾಗಿದೆ.
ತಕ್ಷಣವೇ ಅಲ್ಲಿನ ಸಿಬ್ಬಂದಿ ಹತ್ತಿರದ ವೈದ್ಯರನ್ನು ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡೆಸಿ, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಹಾಗೆಯೆ ಆ್ಯಂಬುಲೆನ್ಸ್ ನಲ್ಲಿ ಜಮಖಂಡಿ ತಾಲೂಕಿನ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಪ್ರಾಣ ಬಿಟ್ಟಿದ್ದಾನೆ.
ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ರಾಹುಲ್ ಕೋಲಕಾರ ಅವರ ದಿಢೀರ ಸಾವಿಗೆ ಶಾಲೆಯ ಶಿಕ್ಷಕರು ತೀವ್ರ ಕಂಬನಿ ಮಿಡಿದಿದ್ದು, ಕುಟುಂಬದವರ ಆಕ್ರಂದನೆ ಮುಗಿಲುಮುಟ್ಟಿತ್ತು.