ಹಾನಗಲ್ಲ: ಚಲಿಸುತ್ತಿದ್ದ ಸಾರಿಗೆ ಬಸ್ನಿಂದ ಶಾಲಾ ಬಾಲಕಿಯೊಬ್ಬಳು ಕೆಳಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.
8ನೇ ತರಗತಿಯಲ್ಲಿ ಓದುತ್ತಿರುವ ಮಧು ಕರಬಸಪ್ಪ ಚಕ್ರಸಾಲಿ(14) ಮೃತ ವಿದ್ಯಾರ್ಥಿನಿ. ತಾಲೂಕಿನ ವಾಸನ ಗ್ರಾಮದ ವಿದ್ಯಾರ್ಥಿನಿ ಪ್ರತಿದಿನ ಕೂಸನೂರ ಗ್ರಾಮದ ಮಾರಿಕಾಂಬಾ ಪ್ರೌಢಶಾಲೆಗೆ ಬಸ್ ಮೂಲಕ ಶಾಲೆಗೆ ತೆರಳುತ್ತಿದ್ದಳು. ಬಸ್ ಪೂರ್ಣ ತುಂಬಿದ್ದರಿಂದ ಬಾಗಿಲಲ್ಲಿ ನಿಂತಿದ್ದ ಮಧು ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.