ಜಿಲ್ಲೆ

ಮಕ್ಕಳಿಗೆ ಪ್ರಜಾಪ್ರಭುತ್ವತ್ಮಾಕ ತರಗತಿ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ನಾವು ಪ್ರತಿಷ್ಠಾನ ಸಂಸ್ಥೆ ಸಹಯೋಗದಲ್ಲಿ "ಮಕ್ಕಳ ಸಂವಿಧಾನ ಕ್ಲಬ್" ಕುರಿತಂತೆ ಕೊಡಗು ಮತ್ತು ಮೈಸೂರು ಜಿಲ್ಲೆಯ ವಸತಿ ಶಾಲಾ ಸಮಾಜ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾ ನಡೆಸಲಾಗಿದ್ದು, ಇದರ ಭಾಗವಾಗಿ ಮಂಗಳವಾರ ಕುಶಾಲನಗರ ತಾಲೂಕು ಬಸವನಹಳ್ಳಿ ಮುರಾರ್ಜಿ ವಸತಿ ಶಾಲೆಗೆ ನಾವು ಪ್ರತಿಷ್ಠಾನ ಭೇಟಿ ನೀಡಿ ತರಗತಿಗಳ ಪರಿವೀಕ್ಷಣೆ ಮಾಡಲಾಯಿತು.

ಸಮಾಜ ವಿಜ್ಞಾನ ಶಿಕ್ಷಕಿ ಜಾನಕಿ ಎಂಟನೇ ತರಗತಿ ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿ ವೈವಿಧ್ಯತೆ ಮತ್ತು ಬಹು ಸಂಸ್ಕೃತಿಗಳ ಕುರಿತು ಮಕ್ಕಳಿಗೆ ಚಟುವಟಿಕೆಗಳ ಮೂಲಕ ಪ್ರಜಾಪ್ರಭುತ್ವತ್ಮಾಕ ತರಗತಿಗಳನ್ನು ತೆಗೆದುಕೊಂಡರು.

ಮಕ್ಕಳಲ್ಲಿ ದೇಶದ ಮಿಶ್ರ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಮತ್ತು ಮತ್ತೊಬ್ಬರ ಆಚರಣೆಗಳನ್ನು ಗೌರವಿಸುವ ಮನೋಭಾವ ಮೂಡಿಸುವಲ್ಲಿ ಈ ತರಗತಿ ಮುಖ್ಯವಾಗಿದ್ದು, ಸಂವಿಧಾನ ಕ್ಲಬ್ ತರಗತಿಗಳು ನಾಗರಿಕತ್ವದ ತಿಳುವಳಿಕೆ ಹಾಗೂ ಪ್ರಜಾಪ್ರಭುತ್ವದ ಮುಖ್ಯ ಆಶಯವನ್ನು ಮಕ್ಕಳಿಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಂವಿಧಾನ ಭಾರತದ ಪ್ರಜೆಗಳಿಗಾಗಿ ನೀಡಿರುವ ಸರ್ವಸಿದ್ಧ ಹಕ್ಕುಗಳ ಬಗ್ಗೆ ನಾವು ಪ್ರತಿಷ್ಠಾನದ ಕಾರ್ಯಕ್ರಮ ಸಂಯೋಜಕಿ ಬಿ.ಕೆ. ಕುಮಾರಿ ಮಕ್ಕಳಿಗೆ ಅರಿವು ಮೂಡಿಸಿದರು.

ಶಾಲಾ ಪ್ರಾಂಶುಪಾಲರಾದ ಶ್ರೀದೇವಿ, ಶಿಕ್ಷಕರಾದ ಪುಟ್ಟರಾಜು, ಶಿಲ್ಪ ನಾಯ್ಕ್, ರಮೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.