ಕೊಪ್ಪ: ಸಾರ್ವಜನಿಕರು ಸ್ಪಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಲ್ಲಿ ಕಸವನ್ನು ಒಣ ಕಸ ಹಾಗೂ ಹಸಿ ಕಸವಾಗಿ ಬೇರ್ಪಡಿಸಿ ಮನೆಗೆ ಬರುವ ಕಸದ ವಾಹನಕ್ಕೆ ನೀಡಬೇಕು ಎಂದು ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್ ಹೇಳಿದರು. ಪಟ್ಟಣ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಡಸ್ಟ್‌ಬಿನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ, ಕೊಪ್ಪವನ್ನು ಕಸ ಮುಕ್ತವಾಗದ ನಗರ ಮಾಡುವ ಕನಸಿದೆ. ರಸ್ತೆ ಬದಿ, ಅಲ್ಲಲ್ಲಿ ಕಸ ಹಾಕದೆ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು ಎಂದರು. ಪಪಂ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಸದಸ್ಯರಾದ ರೇಖಾಪ್ರಕಾಶ್, ಹೇಮಾವತಿ, ವಿಜಯ್ ಕುಮಾರ್, ಮೈತ್ರಾಗಣೇಶ್, ಮುಖ್ಯಾಧಿಕಾರಿ ಚಂದ್ರಕಾಂತ್ ಇದ್ದರು.