ಸಂಡೂರು: ಅರಣ್ಯ ಭೂಮಿ, ಬಗರ್ ಹುಕುಂ ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂದು ಸಿಪಿಎಂ(ಎಂ) ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಹೇಳಿದರು.
ಇದನ್ನೂ ಓದಿ: ಸಂಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಪಟ್ಟಣದ ವಿಜಯ ವೃತ್ತದಲ್ಲಿ ಅರಣ್ಯ ಮತ್ತು ಬಗರ್‌ಹುಕುಂ ಅರ್ಜಿದಾರರಿಗೆ ಜಾಗೃತಿ ಮೂಡಿಸಲು ಸಲುವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಚಾರ ಜಾಥಾ 19 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆಸಲಾಗುವುದು.
ಹಕ್ಕುಪತ್ರಕ್ಕಾಗಿ ದಶಕ ಹಿಂದೆ ಅರ್ಜಿಸಲ್ಲಿಸಲಾಗಿತ್ತು. ಈ ಮತ್ತೊಮ್ಮೆ ಅಧಿಕಾರಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಅರಣ್ಯ ಕಾಯ್ದೆಯಡಿ ಹಕ್ಕು ಪತ್ರ ಪಡೆಯಲು ಸಾಗುವಳಿದಾರರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ ಎಂದರು.
ಕೈಗಾರಿಕೆಗಳ ಪ್ರಾಬಲ್ಯದಿಂದ ರೈತರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಸಾಗುವಳಿ ಭೂಮಿಯನ್ನು ರಾಳ್ಳಗುಡ್ಡ, ಕರಾಪು, ಗೋಮಾಳ, ಹಳ್ಳ ಇತ್ಯಾದಿ ಹೆಸರಿನಲ್ಲಿ ರೈತರಿಗೆ ಭೂಮಿ ನೀಡುವುದರಿಂದ ವಂಚಿಸಲಾಗುತ್ತಿದೆ. ಸಾಗುವಳಿ ಭೂಮಿಯನ್ನು ಸರ್ವೇ ಮಾಡುವ ಮೂಲಕ ಅರ್ಹ ರೈತರಿಗೆ ನೀಡಲು ಒತ್ತಾಯಿಸಲಾಗುತ್ತಿದೆ. ಕೈಗಾರಿಕೋದ್ಯಮಿಗಳಿಗೆ, ಗಣಿ ಮಾಲೀಕರಿಗೆ, ಶ್ರೀಮಂತರಿಗೆ ನೀಡಿರುವುದನ್ನು ರದ್ದುಮಾಡಿ, ಅರ್ಹ ರೈತರಿಗೆ ನೀಡಬೇಕೆಂದು ಒತ್ತಾಯಿಸಿದರು.
ಪಟ್ಟಣದಿಂದ ಹೊರಟ ಜಾಥಾ ಕೃಷ್ಣಾನಗರ, ಮುರಾರಿಪುರ, ತಾರನಗರ, ನಾಗಲಾಪುರ, ಬನ್ನಿಹಟ್ಟಿ, ಲಿಂಗದಹಳ್ಳಿ, ಉಬ್ಬಲಗಂಡಿ, ರಾಜಾಪುರ, ವಿಠಲಾಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.