ವಿಜಯವಾಣಿ ಸುದ್ದಿಜಾಲ ಧಾರವಾಡ
ಕಟ್ಟಡಗಳ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಇಂಜಿನಿಯರ್‌ಗಳು ಸಮಾಜದ ನಂಬಿಕೆಗೆ ಬದ್ಧರಾಗಿರಬೇಕು ಎಂದು ನಟ ರಮೇಶ ಅರವಿಂದ್ ಹೇಳಿದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಹಾಗೂ ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ 2 ದಿನಗಳ ಸಿವಿಟೆಕ್ ಸಮ್ಮಿಟ್‌ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಪ್ರಾಸ್ತಾವಿಕ ಮಾತನಾಡಿ, ಇಂಜಿನಿಯರ್ಸ್ ಅಸೋಸಿಯೇಷನ್‌ನಿಂದ ಇಂಥ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಿಂದ ಕಟ್ಟಡಗಳಲ್ಲಿ ಉಕ್ಕು, ಸ್ಟೀಲ್‌ನ ವಿನ್ಯಾಸ, ರಚನೆ ಮತ್ತು ಬಳಕೆ, ಕಟ್ಟಡಗಳ ಸ್ಥಿರತೆ ಮತ್ತು ಮೌಲ್ಯಮಾಪನ ಸೇರಿ ಹಲವು ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಆಯೋಜಿಸಿರುವುದು ಉಪಯೋಗಕಾರಿ ಎಂದರು.
ಟರ್ಬೋ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಪ್ರವೀಣ್‌ಚಂದ್ರ ಅವರು ಟರ್ಬೋ ಸ್ಟೀಲ್ ಗುಣಮಟ್ಟದ ಮಾನದಂಡಗಳನ್ನು ವಿವರಿಸಿದರು.
ಕಟ್ಟಡಗಳಲ್ಲಿ ಉಕ್ಕು, ಸ್ಟೀಲ್ ವಿನ್ಯಾಸ, ರಚನೆ ಮತ್ತು ಬಳಕೆ ಕುರಿತು ಅಮ್ಮಿನಭಾವಿ ಮತ್ತು ಹೆಗಡೆ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ನ ವ್ಯವಸ್ಥಾಪಕ ನಿರ್ದೇಶಕ ಸಂಜಯ ಅಮ್ಮಿನಬಾವಿ, ಕಟ್ಟಡಗಳ ಸ್ಥಿರತೆ ಮತ್ತು ಮೌಲ್ಯಮಾಪನದ ಕುರಿತು ಡಾ. ಮನಮೋಹನ ಕಲಗಲ, ಕ್ಲಿಷ್ಟಕರ ಮಣ್ಣಿನಲ್ಲಿ ಕಟ್ಟಡಗಳ ನಿರ್ಮಾಣ ಮಾಡುವ ವಿಧಾನಗಳ ಕುರಿತು ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಡಾ. ಜಿ.ಆರ್. ದೊಡಗೌಡರ, ಕಟ್ಟಡಗಳ ರಚನೆಯ ವೈಫಲ್ಯಗಳಿಂದ ಕಲಿಯುವಿಕೆಯ ಕುರಿತು ಸಣ್ಣ ಮತ್ತು ಬೃಹತ್ ಕೈಗಾರಿಕೆ ಇಲಾಖೆ ತಾಂತ್ರಿಕ ಸಲಹೆಗಾರ ಪ್ರೊ. ಅರವಿಂದ ಗಲಗಲಿ ತಜ್ಞ ಮಾಹಿತಿ ಹಂಚಿಕೊAಡರು.
ಅಸೋಸಿಯೇಷನ್ ಅಧ್ಯಕ್ಷ ಸುನೀಲ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಇ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ್‌ಕುಮಾರ್, ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಆರ್.ಜೆ. ಫೆರ್ನಾಂಡಿಸ್, ಇಂಜಿನಿಯರ್ ಕಬೀರ ನದಾಫ್ ಉಪಸ್ಥಿತರಿದ್ದರು. ವಿಜಯ ತೋಟಿಗೇರ ಸ್ವಾಗತಿಸಿದರು. ಸಿದ್ದನಗೌಡ ಪಾಟೀಲ ವಂದಿಸಿದರು.