ನಿವೇಶನ ಹಕ್ಕು ಪತ್ರ ನೀಡಲು ಒತ್ತಾಯಿಸಿ ಕೊಪ್ಪಳದಲ್ಲಿ ನಿವೇಶನ ರಹಿತರು ಬುಧವಾರ ಅರ್ನಿದಿಷ್ಟಾವಧಿ ಧರಣಿ ನಡೆಸಿದರು. ಹೋರಾಟಗಾರರಾದ ಬಸವರಾಜ ಶೀಲವಂತರ, ಡಿ.ಎಚ್​.ಪೂಜಾರ, ಪ್ರತಿಭಟನಕಾರರಾದ ಸಂಜೀವಮೂರ್ತಿ ಚನ್ನದಾಸರ, ಪ್ರವಿಣ ಕನ್ನಾರಿ, ಪದ್ಮಾವತಿ, ಗಂಗಮ್ಮ ಇದ್ದರು. 
ಜಿಲ್ಲೆ

ನಿವೇಶನ ಹಕ್ಕುಪತ್ರ ನೀಡಲು ಒತ್ತಾಯಿಸಿ ಕೊಪ್ಪಳದಲ್ಲಿ ಧರಣಿ

civiliance protest koppal demand site cmc officials

Kopala - Raveendra V K

ಕೊಪ್ಪಳ: ನಗರದ 3ನೇ ವಾರ್ಡ್​ ಕುವೆಂಪು ನಗರದಲ್ಲಿ ಖಾಲಿ ನಿವೇಶನಗಳನ್ನು ವಸತಿ ರಹಿತರಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ನಿವೇಶನ ರಹಿತರು ಬುಧವಾರ ನಗರದ ನಗರಸಭೆ ಕಚೇರಿ ಮುಂಭಾಗದಲ್ಲಿ ಅರ್ನಿಧಿಷ್ಟಾವಧಿ ಧರಣಿ ಆರಂಭಿಸಿದರು.

ನಾವು ಹಲವು ವರ್ಷಗಳಿಂದ ನಗರದ ವಿವಿಧ ಸ್ಲಂಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಸರ್ಕಾರದಿಂದ ಈವರೆಗೆ ಯಾವುದೇ ಮನೆ, ನಿವೇಶನ ಸಿಕ್ಕಿಲ್ಲ. ಸದ್ಯ ಕುವೆಂಪು ನಗರದ ಖಾಲಿ ನಿವೇಶನಗಳಲ್ಲಿ ತಾತ್ಕಾಲಿಕ ಶೆಡ್​ ಮಾಡಿಕೊಂಡು ವಾಸವಿದ್ದೇವೆ. ಅವುಗಳನ್ನು ನಮ್ಮ ಹೆಸರಿಗೆ ಮಾಡಿ ಕೊಡುವಂತೆ ಸಚಿವರು, ಶಾಸಕ, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವೆ.

ಆದರೆ, ನಗರಸಭೆ ಪೌರಾಯುಕ್ತರು ಶೆಡ್​ ತೆರವುಗೊಳಿಸುವಂತೆ ನೋಟಿಸ್​ ನೀಡಿದ್ದಾರೆ. ಇಲ್ಲದಿದ್ದರೆ ನಗರಸಭೆಯಿಂದಲೇ ತೆರವುಗೊಳಿಸುವುದಾಗಿ ತಿಳಿಸಿದ್ದಾರೆಂದು ಧರಣಿ ನಿರತರು ಆರೋಪಿಸಿದರು.

ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ನಾವು ಅರ್ಹ ಲಾನುಭವಿಗಳಾಗಿದ್ದು, ನಾವು ವಾಸವಿರು ಜಾಗವನ್ನು ನಮ್ಮ ಹೆಸರಿಗೆ ಮಾಡಿ ಹಕ್ಕು ಪತ್ರ ನೀಡಬೇಕು. ಸರ್ಕಾರದ ಜಾಗ ಇದಾಗಿದ್ದು, ಅನ್ಯರಿಗೆ ನೀಡದೆ, ಅರ್ಹ ಬಡವರಿಗೆ ಮಂಜೂರು ಮಾಡಬೇಕು. ಅಲ್ಲಿವರೆಗೆ ಧರಣಿ ಮುಂದುವರೆಸುತ್ತೇವೆಂದು ತಿಳಿಸಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ, ಡಿ.ಎಚ್​.ಪೂಜಾರ, ಪ್ರತಿಭಟನಕಾರರಾದ ಸಂಜೀವಮೂರ್ತಿ ಚನ್ನದಾಸರ, ಪ್ರವಿಣ ಕನ್ನಾರಿ, ಪದ್ಮಾವತಿ, ಗಂಗಮ್ಮ, ಪಟದಯ್ಯ, ವಿದ್ಯಾ, ರಫೀಕ್​, ತಿಮ್ಮಮ್ಮ ಇತರರಿದ್ದರು.