ಪುರಸಭೆ ಕಚೇರಿ ಆವರಣದಲ್ಲಿ ಪೌರಕಾರ್ಮಿಕರು ಮಂಗಳವಾರ ಮುಷ್ಕರ ನಡೆಸಿದರು. 
ಜಿಲ್ಲೆ

ಕೆಲಸ ಸ್ಥಗಿತಗೊಳಿಸಿದ ಪೌರಕಾರ್ಮಿಕರು

ದತ್ತಾತ್ರೇಯ ಪಿ ಕುಲಕರ್ಣಿ

ಬಾದಾಮಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ಮಂಗಳವಾರ ಪುರಸಭೆ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೌರ ನೌಕರರ ಸಂಘದ ತಾಲೂಕಾಧ್ಯಕ್ಷ ಸತೀಶ ಹಿರೇಮನಿ ತಿಳಿಸಿದ್ದಾರೆ.

ಬೇಡಿಕೆ ಈಡೇರಿಸುವ ವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಜಮ್ಮನಕಟ್ಟಿ ಹೇಳಿದರು.

ರಂಗಪ್ಪ ಮ್ಯಾಗೇರಿ, ಹನುಮಂತ ಸೂಜಿ, ಶ್ರೀರಾಮ ಬೆಳವಲಕೊಪ್ಪ, ಮಹೇಶ ನಂದಿಕೇಶ್ವರ, ಗಣೇಶ ಮಾದರ, ಮಲ್ಲವ್ವ ಹೂವಿನಗಿಡದ, ಮಾದೇವಿ, ಮಹಾದೇವ ಪಾಲ್ಗೊಂಡಿದ್ದರು.