ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಸೇವಾ ಭಾರತಿ ಟ್ರಸ್ಟ್ನ ಮಂಜುನಾಥ ಮಕ್ಕಳಗೇರಿ ಅವರು ಇಲ್ಲಿನ ರಾಜನಗರದಲ್ಲಿ ಗುರುವಾರ 24 ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸಿ ಸನ್ಮಾನಿಸಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಸೇವಾ ಭಾರತಿ ಟ್ರಸ್ಟಿಗಳಾದ ಶ್ರೀ ಮಂಜುನಾಥ ಶಿವಪ್ಪ ಮಕ್ಕಳಗೇರಿ ಸ್ವಾತಂತ್ರ ದಿನೋತ್ಸವ ಮತ್ತು ಸೇವಾ ಭಾರತಿ ಪರಿಚಯಿಸುತ್ತಾ 1999 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಅನಾಥ ಮಕ್ಕಳಿಗೆ ಆಶ್ರಯ ತಾಣ, ಬುದ್ಧಿಮಾಂದ್ಯ ಮಕ್ಕಳಿಗೆ ಶಾಲೆ, ಅನಿವಾರ್ಯ ಕಾರಣದಿಂದ ಬಿಟ್ಟು ಹೋದ ಹಸು ಗುಸುಗಳ ದತ್ತು ಸ್ವೀಕಾರ ಕೇಂದ್ರ, ಸೇವಾ ಬಸ್ತಿ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಉಚಿತ ಮನೆ ಪಾಠ ಕೇಂದ್ರ ಇತ್ಯಾದಿ ಸೇವಾ ಚಟುವಟಿಕೆಗಳು ನಡೆಸುವ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಧಾರವಾಡ ನಗರದ ರಜತ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶ್ರೀ ಗುರುನಾಥ ವಾಲಿ, ಕಾರ್ಯದರ್ಶಿಗಳಾದ ಶ್ರೀ ಜಗದೀಶ ಯಾದವಾಡ, ಸದಸ್ಯರುಗಳಾದ ರಾಜು ತಳಗೇರಿ ಹಾಗೂ ಮಹಾಂತೇಶ ಚಳ್ಳಾಲ ಮಠ ಉಪಸ್ಥಿತರಿದ್ದರು. ಇವರೊಂದಿಗೆ ಸೇವಾ ಭಾರತೀಯ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಶಂಕರ ಗುಮಾಸ್ತೆ ಹಾಜರಿದ್ದರು.