ಹುಬ್ಬಳ್ಳಿ: ನಗರದ ಶೀಲವಂತರ ಓಣಿಯ ಶ್ರೀ ವರಸಿದ್ಧಿ ವಿನಾಯಕ ಮಂಡಳದ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ 3ನೇ ದಿನವಾದ ಗುರುವಾರ ಹು-ಧಾ ಮಹಾನಗರ ಪಾಲಿಕೆಯ 50 ಜನ ಪೌರ ಕಾರ್ವಿುಕರನ್ನು ಸನ್ಮಾನಿಸಲಾಯಿತು.
ಮಂಡಳದ ಅಧ್ಯಕ್ಷ ರಮೇಶ ಬಾಫಣಾ ಮಾತನಾಡಿ, ಸುಂದರ-ಸ್ವಚ್ಛ ನಗರವನ್ನು ರೂಪಿಸುವಲ್ಲಿ ಪೌರ ಕಾರ್ವಿುಕರ ಕೊಡುಗೆ ದೊಡ್ಡದು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ನಗರವನ್ನು ರೂಪಿಸುವಲ್ಲಿ ಮಹತ್ವದ್ದಾಗಿದೆ. ಸ್ವಚ್ಛತೆಯಿಂದ ಉತ್ತಮ ಪರಿಸರವನ್ನು ಕಾಣಬಹುದು ಎಂದರು.
ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಬೆಂಡಿಗೇರಿ, ಪ್ರಕಾಶ ಸಾಂಬ್ರಾಣಿ, ಕಮಡೊಳ್ಳಿ ಶೆಟ್ಟರ್, ಕಿರಣ ಬೆಟಗೇರಿ, ಸುಭಾಶ ಡಂಕ್, ಇತರರು ಇದ್ದರು.