ಕಾರ್ಮಿಕ ದಿನ ಅಂಗವಾಗಿ ಕೋಲಾರ ತಾಲೂಕು ವೇಮಗಲ್​ -ಕುರುಗಲ್​ ಪಪಂ ಕಚೇರಿಯಲ್ಲಿ ಕರ್ನಾಟಕದ ಹಿತ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ನಾರಾಯಣಸ್ವಾಮಿ ಅವರು ಪೌರಕಾರ್ಮಿಕರನ್ನು ಸನ್ಮಾನಿಸಿ, ಬಟ್ಟೆ ವಿತರಿಸಿದರು. ಗ್ರಾಪಂ ಅಧ್ಯಕ್ಷ ಬಿ.ನಾಗರಾಜ್​, ಪುರಹಳ್ಳಿ ಜಿ.ಯಲ್ಲಪ್ಪ, ದೀಪಾ, ನಟರಾಜ್​, ಶ್ರೀನಿವಾಸ್​, ಆರ್​.ಮುನಿರಾಜ್​ ಇದ್ದರು. 
ಜಿಲ್ಲೆ

ಎಲ್ಲರ ಆರೋಗ್ಯ ಹಿತಚಿಂತಕರು ಪೌರ ಕಾರ್ಮಿಕರು

ಕರ್ನಾಟಕ ಹಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ಅಭಿಮತ

ವೇಮಗಲ್​: ಪಟ್ಟಣ ಸ್ವಚ್ಛತೆಯಿಂದಿರಲು ಹಾಗೂ ನಾವೆಲ್ಲರೂ ಆರೋಗ್ಯದಿಂದಿರಲು ಪೌರ ಕಾರ್ಮಿಕರು ಪ್ರಮುಖ ಕಾರಣ ಎಂದು ಕರ್ನಾಟಕ ಹಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

ಕೋಲಾರ ತಾಲೂಕು ವೇಮಗಲ್​ -ಕುರುಗಲ್​ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಕಾರ್ಮಿಕ ದಿನ ಅಂಗವಾಗಿ ಕರ್ನಾಟಕದ ಹಿತ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಉಚಿತ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,

ನಾವೆಲ್ಲರೂ ಆರೋಗ್ಯದಿಂದ ಬದುಕಲು ಕಾರಣಕರ್ತರಾದ ಪೌರ ಕಾರ್ಮಿಕರು ನಿಜವಾದ ದೇವರುಗಳು. ಈ ದಿನದ ಕಾರ್ಯಕ್ರಮಕ್ಕೆ ಸಹಪಂಕ್ತಿ ಭೋಜನ ಸ್ಫೂರ್ತಿ ಎಂದರು.

ವರ್ಷವಿಡೀ ಜನರ ಸೇವೆ ಮಾಡುತ್ತೀರಿ. ವರ್ಷದಲ್ಲಿ ಒಂದು ದಿನ ನಿಮ್ಮ ಸೇವೆ ಮಾಡುವ ಭಾಗ್ಯ ನಮಗೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಮಾಡುವ ಮೂಲಕ ಬದಲಾವಣೆ ಎಂಬುದು ಮೊದಲು ನಮ್ಮ ಪಟ್ಟಣ, ತಾಲೂಕು, ಜಿಲ್ಲೆ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಗಬೇಕು. ತಮ್ಮೆಲ್ಲರನ್ನೂ ಗುರುತಿಸುವ ಕೆಲಸವಾಗಬೇಕು ಎಂದರು.

ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮದುವೆ, ವಸತಿ, ಹೆರಿಗೆ ಸೇರಿ ಇತರೆ ಸೌಲಭ್ಯಗಳಿಗಾಗಿ ಗಮನಕ್ಕೆ ತಂದರೆ

ಕೈಲಾದ ಸಹಾಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​ ಮಾತನಾಡಿ, ಪೌರಕಾರ್ಮಿಕರೆಂದರೆ ಅನೇಕರು ತಿರಸ್ಕಾರದಿಂದ ಕಾಣುತ್ತಾರೆ. ಅಂತಹ ಉದಾಹರಣೆಗಳು ಬಹಳಷ್ಟಿವೆ. ನಾವು ಕೂಡ ನೊಂದು ಕೆಲಸ ಮಾಡುತ್ತಾ ಬಂದಿದ್ದೇವೆ. ಅಂತಹ ಮನೋಭಾವ ಎಲ್ಲರಿಂದಲೂ ದೂರವಾಗಬೇಕು ಎಂದರು. ಕರ್ನಾಟಕ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ (ಬಾಬಣ್ಣ ), ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗರಾಜ್​, ರಾಜ್ಯ ದಲಿತ ನಾಗರಿಕ ಸಮಿತಿ ಅಧ್ಯಕ್ಷ ಪುರಹಳ್ಳಿ ಜಿ.ಯಲ್ಲಪ್ಪ,

ಜಿಲ್ಲಾಧ್ಯಕ್ಷ ನಾಗನಾಳ ರಮೇಶ್​, ಕಾರ್ಮಿಕ ಘಟಕದ ಅಧ್ಯಕ್ಷ ನಾಗರಾಜ್​, ಜಿಲ್ಲಾಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್​, ಮುಖಂಡರಾದ ನಟರಾಜ್​, ಬಿಬಿಎಂಪಿ ರಾಜಕಲ್ಲಹಳ್ಳಿ ಶ್ರೀನಿವಾಸ್​, ಪತ್ರಕರ್ತ ಆರ್​.ಮುನಿರಾಜ್​, ಆರೋಗ್ಯ ನಿರೀಕ್ಷಕಿ ದೀಪಾ ಇದ್ದರು.