ಜಿಲ್ಲೆ

ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ. ಕೌಜಲಗಿ ಆಯ್ಕೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮತ್ತು ನಗರ ಘಟಕದ ಅಧ್ಯಕ್ಷೆ ವಿದ್ಯಾ ವಂಟಮೂರಿ ಅವರ ನೇತತ್ವದಲ್ಲಿ ಮಾರ್ಚ 20ರಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿರುವ ಹುಬ್ಬಳ್ಳಿ ನಗರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಕೆ.ಎಸ್. ಕೌಜಲಗಿ ಆಯ್ಕೆಯಾಗಿದ್ದಾರೆ.

ಇಲ್ಲಿಯ ಲಿಂಗರಾಜನಗರದಲ್ಲಿರುವ ಅವರ ನಿವಾಸದಲ್ಲಿ ಪ್ರೊ. ಕೌಜಲಗಿ ದಂಪತಿಗೆ ಪರಿಷತ್ ವತಿಯಿಂದ ಸನ್ಮಾನಿಸಿ ಆಮಂತ್ರಣ ನೀಡಿಲಾಯಿತು.

ಜಿ.ವಿ. ಚಿಕ್ಕಮಠ, ಎಸ್.ಎಸ್. ದೊಡ್ಡಮನಿ, ವಿರುಪಾ ಕಟ್ಟಿಮನಿ, ಕವಿಗಳಾದ ಎಸ್.ಆರ್. ಆಶಿ, ಸಿ.ಎಂ. ಚನ್ನಬಸಪ್ಪ ಅವರು ಕೌಜಲಗಿ ಅವರ ಜೀವನ, ಸಾಧನೆಗಳ ಕುರಿತು ಮಾತನಾಡಿದರು.

ಸಂಧ್ಯಾ ದೀಕ್ಷಿತ, ಗಿರಿಜಾ ಚಿಕ್ಕಮಠ ಮತ್ತು ಶೋಭಾ ಜಾಬೀನ ಪ್ರಾರ್ಥಿಸಿದರು. ಸಿದ್ದಮ್ಮ ಅಡಿವೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡಶೆಟ್ಟರ ವಂದಿಸಿದರು.