ಜಿಲ್ಲೆ

ಬೆಳಗಾವಿಯಲ್ಲಿ ನೇಕಾರ ಕಾಲೊನಿಗೆ ನುಗ್ಗಿದ ಮಳೆ ನೀರು;ಜನಜೀವನ ಅಸ್ತವ್ಯಸ್ತ


ಬೆಳಗಾವಿ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಳಿಗಾಳಿಗೆ ಬೆಳಗಾವಿ ನಗರ, ನದಿ ದಡದ ಪ್ರದೇಶದ ಜನರು ತತ್ತರಿಸಿದ್ದಾರೆ.
ಬಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಳಗಾವಿ ನಗರದ ಸಾಯಿ ನಗರದ ನೇಕಾರ ಕಾಲೊನಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ.
  ಜಿಲ್ಲೆಯ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬೆಳಗಾವಿ ನಗರದ ಹೊರ ವಲಯದಲ್ಲಿ ಬಳ್ಳಾರಿ ನಾಲಾ, ಮೂಡಲಗಿ, ಗೋಕಾಕ,ಖಾನಾಪುರ, ಹುಲ್ಕೇರಿ,ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 27ಸೇತುವೆ ಜಲಾವೃತಗೊಂಡಿವೆ. ಕೆಲವು ಕಡೆ ಸಂಚಾರ ಸ್ಥಗಿತಗೊಂಡಿದೆ.