ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ನಗರ ಬಸ್ ಸಂಚಾರಕ್ಕೆ ಶಾಸಕ ಯಶವಂತ್ರಾಯಗೌಡ ಪಾಟೀಲ ಸೋಮವಾರ ಚಾಲನೆ ನೀಡಿದರು.
ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ನಗರ ವಾಸಿಗಳಿಗೆ ಈ ಬಸ್ ಸಂಚಾರದಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೆ.ಕೆ.ಎರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ, ಇಂದಿನಿಂದ ಎರಡು ನಗರ ಬಸ್ಗಳು ಸಂಚರಿಸಲಿವೆ. ವಾಚು ನಗರದಿಂದ ಬಸ್ ನಿಲ್ದಾಣ ಮುಖಾಂತರ ಆದರ್ಶ ಶಾಲೆ, ಕೆಇಬಿ ವರೆಗೆ ಮತ್ತು ಸಾತಪುರದಿಂದ ರೇಲ್ವೆ ನಿಲ್ದಾಣ ಮುಖಾಂತರ ಬಸ್ ನಿಲ್ದಾಣ ಮತ್ತು ಸ್ಪಂದನಾ ಆಸ್ಪತ್ರೆ ವರೆಗೆ ಎರಡು ಬಸ್ಗಳು ಸಂಚರಿಸಲಿವೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ವಿಭಾಗೀಯ ಅಧಿಕಾರಿ ಎಂ.ಎಸ್.ಹಿರೇಮಠ, ಟಕ ವ್ಯವಸ್ಥಾಪಕ ರೇವಣಸಿದ್ದ ಖೆನೂರ, ತಾಂತ್ರಿಕ ಶಿಲ್ಪಿ ನಾಗರಾಜ, ಆನಂದ ಬಡಿಗೇರ, ಕಾಶಿನಾಥ ಹೊಸಮನಿ, ಆರ್.ಎಂ.ಮೋರೆ, ಜಿ.ಸಿ.ಹಿರೇಮಠ, ಗಂಗಾಧರ ಸಾಲೇಂಗಾಂವ, ಸದಾಶಿವ ಪ್ಯಾಟಿ, ಜಾವೀದ ಮೋಮಿನ, ಹುಚ್ಚಪ್ಪ ತಳವಾರ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ ಉಪಸ್ಥಿತರಿದ್ದರು.