ಜಿಲ್ಲೆ

ಸಾರಿಗೆ ಬಸ್ ನಲ್ಲಿ  50ಗ್ರಾಂ. ಚಿನ್ನ ಕಳೆದುಕೊಂಡ‌ ಮಹಿಳೆ


ಬೆಳಗಾವಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದ ಮಹಿಳೆಯರ‌ ಬಳಿಯಿದ್ದ ಸುಮಾರು  ೫೦ ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ನಿವಾಸಿ 30 ವರ್ಷದ ಗೃಹಿಣಿ ಆರತಿ ಹನುಮಂತ್ ಕಡೋಲ್ಕರ್ ಮಂಗಳವಾರ (ಜೂನ್ 20) ತನ್ನ ಪೋಷಕರು ಮತ್ತು ಒಂದೂವರೆ ವರ್ಷದ ಮಗಳೊಂದಿಗೆ ಕಡೋಲಿ ಗ್ರಾಮದಿಂದ ಬೆಳಗಾವಿ ನಗರಕ್ಕೆ NWKRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲ ನೆಹರೂನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬರಲು ಬಸ್‌ನಿಂದ ಇಳಿದರು. ಸಂಬಂಧಿಕರ ಮನೆಗೆ ತೆರಳಿದ ಮಹಿಳೆ ವ್ಯಾನಿಟಿ ಬ್ಯಾಗ್‌ ಪರಿಶೀಲಿಸಿದಾಗ ಬ್ಯಾಗ್‌ನ ಚೈನ್‌ ತೆರೆದಿದ್ದು, ಅದರಲ್ಲಿ ಇಟ್ಟಿದ್ದ ಸಣ್ಣ ಪರ್ಸ್‌ ಕಾಣೆಯಾಗಿತ್ತು. ಆಕೆಯ ಬಳಿಯಿದ್ದ 50 ಗ್ರಾಂ ಚಿನ್ನದ ಸರ, ಎಟಿಎಂ ಕಾರ್ಡ್, ಪತಿಯ ಬಿಎಸ್‌ಎಫ್ ಮಿಲಿಟರಿ ಕಾರ್ಡ್, ಬೆಳ್ಳಿಯ ಕಾಲುಂಗರ, ವಾಚ್‌, ಸೇರಿದಂತೆ ಸುಮಾರು 2.10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಕೂಡಲೇ ಮಹಿಳೆಯರು ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ