ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಸಿ ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪದಾಕಾರಿಗಳಾದ ಎಂ.ಡಿ.ಅಮೀರ ಅಲಿ, ಎಂ.ಗಂಗಾಧರ, ಜಿ.ಅಮರೇಶ, ಮಲ್ಲಯ್ಯ ಕಟ್ಟಿಮನಿ, ಚಿನ್ನಪ್ಪ ಕೊಟ್ರಿಕಿ, ಅಜೀಜ್ ಜಾಗೀರದಾರ್, ಜಿ.ಅಡವಿರಾವ್, ಆದೇಶ ನಗನೂರು, ರುಕ್ಮಿಣಿ, ಬಸವರಾಜ, ತಿಪ್ಪರಾಜ, ವೆಂಕಟೇಶ ನಾಯಕ, ಸೈಯದ್ ಅಬ್ಬಾಸ ಅಲಿ ಇದ್ದರು. 
ಜಿಲ್ಲೆ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬೇಡ

ರಾಚಯ್ಯ ಸ್ವಾಮಿ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಜಾತ್ಯಾತೀತ ವಿರೋ ಹಾಗೂ ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದ ಬಳಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
2019ರ ಡಿ.11ರಂದು ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ದೇಶಾದ್ಯಂತ ಜರುಗಿದ ಪ್ರತಿಭಟನೆಗಳು ಹಾಗೂ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಕಾಯ್ದೆ ಜಾರಿ ತಡೆ ಹಿಡಿಯಲಾಯಿತು.
ಚುನಾವಣೆ ಅಸೂಚನೆ ಹೊರಡುವ ಮುನ್ನಾ ದಿನ ಬಹು ಸಂಖ್ಯಾತ ಹಿಂದುತ್ವ ಧ್ರುವೀಕರಣ ಸೃಷ್ಟಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಸಿಎಎ ಮೇಲೆ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನ ಕೈಗೊಳ್ಳುವ ಮುಂಚೆ 2024ರ ಅಸೂಚನೆಗೆ ಮುಂದಾಗಿದೆ.
ಭಾರತಕ್ಕೆ ಅಘಾನಿಸ್ತಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಆರು ಮುಸ್ಲಿಮೇತರ ಸಮುದಾಯಗಳಿಗೆ ಸಿಎಎ ಭಾರತೀಯ ಪೌರತ್ವ ವಿಸ್ತರಿಸುತ್ತದೆ ಆದರೆ ಮುಸ್ಲಿಮರನ್ನು ಹೊರತುಪಡಿಸಲಾಗಿದೆ. ಇದರು ಸಂವಿಧಾನದ ಜಾತ್ಯಾತೀತರೆಯನ್ನು ದುರ್ಬಲಗೊಳಿಸುತ್ತಿದೆ.
ಪೌರತ್ವದ ಮಾನದಂಡವಾಗಿ ಧರ್ಮ ಸೇರಿಸುವುದು ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವಾಗಿದೆ. ತುಳಿತಕ್ಕೊಳಗಾದ ಮುಸ್ಲಿಂ ಅಲ್ಪ ಸಂಖ್ಯಾತರು, ದಲಿತರು ಸರ್ಕಾರದ ಕ್ರಮದ ವಿರುದ್ಧವಾಗಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಪದಾಕಾರಿಗಳಾದ ಎಂ.ಡಿ.ಅಮೀರ ಅಲಿ, ಎಂ.ಗಂಗಾಧರ, ಜಿ.ಅಮರೇಶ, ಮಲ್ಲಯ್ಯ ಕಟ್ಟಿಮನಿ, ಚಿನ್ನಪ್ಪ ಕೊಟ್ರಿಕಿ, ಅಜೀಜ್ ಜಾಗೀರದಾರ್, ಜಿ.ಅಡವಿರಾವ್, ಆದೇಶ ನಗನೂರು, ರುಕ್ಮಿಣಿ, ಬಸವರಾಜ, ತಿಪ್ಪರಾಜ, ವೆಂಕಟೇಶ ನಾಯಕ, ಸೈಯದ್ ಅಬ್ಬಾಸ ಅಲಿ ಪಾಲ್ಗೊಂಡಿದ್ದರು.