ಜಿಲ್ಲೆ

ಎನ್‌ಐಟಿಕೆಯಲ್ಲಿ ಸಿಐಎಸ್‌ಎಫ್‌ ಘಟಕದಿಂದ ವನಮಹೋತ್ಸವ

ಮಂಗಳೂರು: ಎಂಆರ್‌ಪಿಎಲ್‌ನ ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಸಿಐಎಸ್‌ಎಫ್‌ ವತಿಯಿಂದ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಬುಧವಾರ ಬೃಹತ್‌ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.
ಸಿಐಎಸ್‌ಎಫ್‌ ಕಮಾಂಡೆಂಟ್‌ ಡಿ.ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಸಿಐಎಸ್‌ಎಫ್‌ ಸಿಬ್ಬಂದಿ ಪಾಲ್ಗೊಂಡರು. ಪರಿಸರ ಸಂರಕ್ಷಣೆ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ 600ರಷ್ಟು ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ವಲಯ ಅರಣ್ಯಾಧಿಕಾರಿ ಶ್ರೀಧರ್‌, ಎನ್‌ಐಟಿಕೆ ಹಳೆವಿದ್ಯಾರ್ಥಿ ವ್ಯವಹಾರಗಳ ಡೀನ್‌ ಪ್ರೊ.ಕೆ.ಪಿ.ವಿಠಲ್‌, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್‌ ಪ್ರೊ.ಜಗನ್ನಾಥ ನಾಯಕ್‌, ರಿಜಿಸ್ಟ್ರಾರ್‌ ರವೀಂದ್ರ ನಾಥ್‌, ಸಂಚಾಲಕ ಪ್ರೊ.ಎಂ.ಅರುಣ್‌ ಎಂ.ಇಸ್ಲೂರ್‌, ವಿದ್ಯಾರ್ಥಿ ಚಟುವಟಿಕೆ ಅಧಿಕಾರಿ ಡಾ.ಮನೋಜ್‌, ಡಾ.ಹೇಮಪ್ರಸಾದ್‌ ನಾಥ್‌ ಪಾಲ್ಗೊಂಡರು.