ಬೆಳಗಾವಿ:ಕರ್ನಾಟಕ-ಗೋವಾ ಗಡಿಯಲ್ಲಿನ ಖಾನಾಪುರ ತಾಲೂಕಿನ ಚಿಗುಳೆ ಗ್ರಾಮದಲ್ಲಿ ಚಿತ್ರಿಕರಣಗೊಂಡ, ನೈಜ ಘಟನೆ ಆಧಾರಿತ 'ಪರ್ಯಾಯ' ಕನ್ನಡ ಚಲನಚಿತ್ರ ಸೆಪ್ಟೆಂಬರ್ 8ಕ್ಕೆ 115 ಚಿತ್ರ ಮಂದಿರಗಳಲ್ಲಿ ತೆರೆಗೊಳ್ಳಲಿದೆ ಎಂದು ನಿರ್ದೇಶಕ ರಮಾನಂದ ಮಿತ್ರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಚಲನಚಿತ್ರ ದಲ್ಲಿನಾಯಕಿ ಪಾತ್ರ ಇರುವುದಿಲ್ಲ. ಲವಲವಿಕೆ ಸಂಭಾಷಣೆ, ಹಾಸ್ಯ ದೃಶ್ಯ ಗಳು, ಹಾರರ್ ದೃಶ್ಯಗಳನ್ನು ಒಳಗೊಂಡಿದೆ. ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆ ಗಳನ್ನು ಒಳಗೊಂಡಿರುವ ವಿಷಯಗಳಿಗೆ ಆದ್ಯತೆನೀಡಲಾಗಿದೆ. ಚಲನಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಪಕ ರಾಜಕುಮಾರ,ಮುರಗೇಶ ಶಿವಪೂಜೆ ಇತರರಿದ್ದರು.