ಚಿಕ್ಕಬಳ್ಳಾಪುರ: ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪೌಲ್ಗೆ ಸಂಬಂಧಿತ ತನಿಖೆ ಇದೀಗ ಅವರ ಫಾರ್ಮ್ಹೌಸ್ವರೆಗೂ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿರುವ ಅವರ ಫಾರ್ಮ್ಹೌಸ್ಗೆ ತೆರಳಿರುವ ಸಿಐಡಿ ಅಧಿಕಾರಿಗಳು ಅಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಹುಸಹುಡ್ಯಾ ಗ್ರಾಮದಲ್ಲಿ ಈ ಫಾರ್ಮ್ಹೌಸ್ ಇದೆ. 234/4/, 247/2. 247/5 ಸೇರಿ ಒಟ್ಟು ಐದು ಸರ್ವೇ ನಂಬರ್ ಒಳಗೊಂಡಂಥ ಜಮೀನಲ್ಲಿ ಈ ಫಾರ್ಮ್ಹೌಸ್ ಇದ್ದು, ಸುಮಾರು ಐದು ಎಕರೆ ಪ್ರದೇಶವನ್ನು ಒಳಗೊಂಡಿದೆ ಎನ್ನಲಾಗಿದೆ.
ನೆಟರಾಮ್ ಬನ್ಸಲ್ ಎಂಬವರ ಹೆಸರಿನಲ್ಲಿ ಫಾರ್ಮ್ಹೌಸ್ ಇದ್ದು, ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಇನ್ನೂ ಮುಂದುವರಿದಿದೆ.