oppo_2 
ಜಿಲ್ಲೆ

ಎಂಎಲ್ಸಿ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿ

ರಮೇಶ ಮೇಳಕುಂದಾ

ಕಲಬುರಗಿ: ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ ಪುತ್ರ ವಿನಯ್ ವಲ್ಯಾಪುರೆ ವಿರುದ್ಧ 2022ರಲ್ಲಿ ನಿಗಮದ 12 ಕೋಟಿ ಹಣ ದುರ್ಬಳಕೆ ಆರೋಪವಿದೆ.

ಕೋರ್ಟ್‌ ಸರ್ಚ್‌ ವಾರೆಂಟ್ ಹಿನ್ನೆಲೆ ಮನೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು. ಕಲಬುರಗಿ ನಗರದ ಸಂತೋಷ್ ಕಾಲನಿಯಲ್ಲಿನ ವಲ್ಯಾಪುರ ಮನೆಯೊಳಗೆ ದಾಖಲೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು.