ಜಿಲ್ಲೆ

ಪಂಚಮಿ ಹಾಡಿನ ಸ್ಪರ್ಧೆ ವಿಜೇತರು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಡಾ. ಮೂಜಗಂ ಸಭಾಂಗಣದಲ್ಲಿ ಲೇಖಕಿಯರ ರಾಜ್ಯ ಮಟ್ಟದ ಸಮ್ಮೇಳನ ಅಂಗವಾಗಿ ಭಾನುವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪಂಚಮಿ ಜನಪದ ಹಾಡಿನ ಸ್ಪರ್ಧೆಯಲ್ಲಿ ಸಹನಾ ಕಲಾ ಸಂಸ್ಕೃತಿ ಸಂಸ್ಥೆ ಮೊದಲ ಸ್ಥಾನ ಪಡೆದಿದೆ.

ಆರೂಢ ಮಹಿಳಾ ಮಂಡಳಿ ದ್ವಿತೀಯ ಹಾಗೂ ಮಂದಹಾಸ ಮಹಿಳಾ ತಂಡ ತೃತೀಯ ಬಹುಮಾನ ಪಡೆದಿವೆ. ಮಾರುತಿ ಭಜನಾ ಮಂಡಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ವಿಜೇತರಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು.

ಲಿಂಗರಾಜನಗರ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ಗೀತೆಗಳ ಸ್ಪರ್ಧೆಯಲ್ಲಿ ಮಂದಹಾಸ ತಂಡ ಮೊದಲ ಸ್ಥಾನ, ಕಲ್ಯಾಣಿ ಮಹಿಳಾ ತಂಡ ದ್ವೀತಿಯ, ಅಕ್ಕಮಹಾದೇವಿ ಸಂಘ ತೃತೀಯ ಸ್ಥಾನ ಗಳಿಸಿವೆ.
ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದವು.

ಪಾಲ್ಗೊಂಡ ಎಲ್ಲ ಸದಸ್ಯರಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವರಿಸಲಾಯಿತು.
ನಿರ್ಣಾಯಕರಾಗಿ ಡಾ. ರಾಮು ಮೂಲಗಿ, ಡಾ. ವೆಂಕಟೇಶ ಕುಲಕರ್ಣಿ, ಎಸ್.ಐ. ನೇಕಾರ ಹಾಗೂ ರೇಖಾ ಸುದೇಶರಾವ್ ಕಾರ್ಯ ನಿರ್ವಹಿಸಿದರು ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.