ಸುಂಟಿಕೊಪ್ಪದಲ್ಲಿ ಕ್ಯಾರೋಲ್ಸ್ ವೃಂದ ಪ್ರತಿ ಮನೆ ಮನೆಗೆ ತೆರಳಿ ಕ್ರಿಸ್ತ ಜಯಂತಿ ಶುಭ ಸಂದೇಶವನ್ನು ಸಾರುತ್ತಿರುವುದು. 
ಜಿಲ್ಲೆ

ಕ್ರಿಸ್‌ಮಸ್ ಆಚರಣೆಗೆ ಚರ್ಚ್ಗಳು ಸಿದ್ಧ

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲು ಇಲ್ಲಿನ ದೇವಾಲಯಗಳು ಸಿದ್ಧವಾಗುತ್ತಿದ್ದು, ಇದಕ್ಕಾಗಿ ಕ್ರೈಸ್ತ ಧರ್ಮಗರುಗಳು, ಕ್ರೈಸ್ತರು ಶ್ರಮವಹಿಸುತ್ತಿದ್ದಾರೆ.

ಕ್ರೈಸ್ತರ ಮನೆಗಳು ವಿವಿಧ ಬಣ್ಣ ಬಣ್ಣದ ನಕ್ಷತ್ರಗಳಿಂದ ಅಲಂಕಾರಗೊಳ್ಳುತ್ತಿದ್ದು, ಕ್ರಿಸ್ತರು ಜನಿಸಿದ ಸ್ಥಳ ದನದಕೊಟ್ಟಿಗೆ (ಗೋದಲಿ) ನಿರ್ಮಾಣದೊಂದಿಗೆ ದೇವಾಲಯ ಅಲಂಕಾರಗೊಳ್ಳುತ್ತಿದೆ.

ಕ್ಯಾರೋಲ್ ಗಾಯನದ ಅಂಗವಾಗಿ ಇಲ್ಲಿನ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇವರೆಂಡ್ ಫಾದರ್ ವಿಜಯಕುಮಾರ್, ಸಾಂತಕ್ಲಾಸ್ ವೇಷಾಧಾರಿ, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ದೇವಾಲಯದ ಪಾಲನಾ ಸಮಿತಿಯ ಪದಾಧಿಕಾರಿಗಳು, ಯುವಕ ಯುವತಿಯುರು ಹಾಗೂ ಚಿಕ್ಕಮಕ್ಕಳು ಪ್ರತಿ ಮನೆಗೆ ತೆರಳಿ ವಿಶೇಷ ಪ್ರಾರ್ಥನೆ, ಗಾಯನ ಹಾಡುತ್ತ ಶುಭ ಸಂದೇಶವನ್ನು ವಾಚಿಸುತ್ತಿದ್ದಾರೆ. ಜತೆಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

.