ಜಿಲ್ಲೆ

ಚರ್ಚ್ ಪತ್ರ ದುರುಪಯೋಗ, ಆರೋಪಿ ವಶ

ಮೂಡುಬಿದಿರೆ: ಚರ್ಚ್ ಪತ್ರ ದುರುಪಯೋಗಪಡಿಸಿ ಹಣ ವಸೂಲಿ ಮಾಡುತ್ತಿದ್ದ ವಿನೋದ್ ವಾಲ್ಟರ್ ಪಿಂಟೊ ಎಂಬಾತನ ವಿರುದ್ಧ ಚರ್ಚ್ ಪಾಲನಾ ಸಮಿತಿಯವರು ದೂರು ನೀಡಿದ್ದು, ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ತಾಕೊಡೆಯ ಸುರ್ಲಾಯಿಯಲ್ಲಿ ವಾಸ್ತವ್ಯವಿರುವ ಹೆನ್ರಿ ನೊರೊನ್ಹಾ ಅವರ ಪುತ್ರ ಮರ್ವಿನ್ ನೊರೊನ್ಹಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ತಂದೆಯ ಕಿಡ್ನಿಯನ್ನು ವರ್ಗಾಯಿಸಲು ಆರ್ಥಿಕ ನೆರವನ್ನು ಕೋರಿ ಮರ್ವಿನ್ ನೊರೊನ್ಹಾ ಅವರ ಬ್ಯಾಂಕ್ ಖಾತೆ ಸಹಿತ ಒಂದು ಮನವಿ ಪತ್ರವನ್ನು ಚರ್ಚ್ ವಾಟ್ಸಾೃಪ್ ಗ್ರೂಪ್‌ನಲ್ಲಿ ಹಾಕಿದ್ದರು. ಆರೋಪಿ ವಿನೋದ್ ಚರ್ಚ್ ಮನವಿ ಪತ್ರವನ್ನು ದುರುಪಯೋಗಪಡಿಸಿ ಮನವಿ ಪತ್ರದಲ್ಲಿದ್ದ ಖಾತೆಯ ವಿವರ ಅಳಿಸಿ, ತನ್ನ ಬ್ಯಾಂಕ್ ವಿವರ ಹಾಕಿ ಇನ್ನೊಂದು ವಾಟ್ಸಾೃಪ್ ಗ್ರೂಪ್‌ನಲ್ಲಿ ಹಾಕಿ ಹಣ ಸಂಗ್ರಹ ಮಾಡಿ ವಂಚನೆ ಮಾಡಿದ್ದಾನೆ ಎಂದು ಚರ್ಚ್ ಆರ್ಥಿಕ ಸಮಿತಿ ಸದಸ್ಯೆ ಐವಿ ಕ್ರಾಸ್ತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.