ಜಿಲ್ಲೆ

ಸಿದ್ದಲಿಂಗಪುರ ಸೆಂಟ್ ಜಾರ್ಜ್ ಚರ್ಚ್ ವಾರ್ಷಿಕೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ:

ತಾಲೂಕಿನ ಗಡಿಗ್ರಾಮ ಸಿದ್ದಲಿಂಗಪುರ ಗ್ರಾಮದಲ್ಲಿನ ಸೆಂಟ್ ಜಾರ್ಜ್ ಚರ್ಚ್ ವತಿಯಿಂದ ಭಾನುವಾರ ಸೆಂಟ್ ಜಾರ್ಜ್ ಚರ್ಚ್ ಹಾಗೂ ಸಂತ ಸೆಬಾಸ್ಟಿಯನ್ ವಾರ್ಷಿಕೋತ್ಸವ ವಿಜೃಂಭಣೆಯಿAದ ನಡೆಯಿತು. ಚರ್ಚ್ ಆವರಣದಲ್ಲಿ ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಚರ್ಚ್ ಹಾಗೂ ಗ್ರಾಮದ ಪ್ರಮುಖ ಬೀದಿಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿ ಶೃಂಗಾರ ಮಾಡಲಾಯಿತು.

ರೆವರೆಂಡ್ ಫಾದರ್ ಡಾ. ಇಬ್ರಾಹಿಂ ಜೋಸೆಫ್ ನೇತೃತ್ವದಲ್ಲಿ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಫಾದರ್ ನೇತೃತ್ವದಲ್ಲಿ ಭಕ್ತರು ಮೇಣದ ಬತ್ತಿ ಹಿಡಿದು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಮರಿಯಾನಗರ, ಗೋಪಾಲಪುರ, ಶನಿವಾರಸಂತೆ, ಕೂಡಿಗೆ, ಕೊಡ್ಲಿಪೇಟೆ ಸೇರಿದಂತೆ ವಿವಿದ ಚರ್ಚ್ಗಳ ಫಾದರ್ ಹಾಗೂ ಸಿಸ್ಟರ್‌ಗಳು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.

ಸಿದ್ದಲಿಂಗಪುರ, ಬಾಣವಾರ, ಮರಿಯಾನಗರ, ಅರಿಸಿನಗುಪ್ಪೆ,ಅಳುವಾರ, ಹೆಬ್ಬಾಲೆ, ಅರಗಲ್ಲು ವ್ಯಾಪ್ತಿಯ ಕ್ರೈಸ್ತರು ವಾರ್ಷಿಕ ಹಬ್ಬಕ್ಕೆ ಆಗಮಿಸಿ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.

ಈ ಸಂದರ್ಭ ಸೆಂಟ್ ಜಾರ್ಜ್ ಚರ್ಚ್ ಪಾಲನಾ ಸಮಿತಿ ಅಧ್ಯಕ್ಷ ಎಂ.ವಿ. ಜೋಸೆಫ್, ಉಪಾಧ್ಯಕ್ಷರು, ಸಮಿತಿ ಸದಸ್ಯರು, ತೊರೆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೇಬಿ ಹಾಗೂ ಗ್ರಾಮಸ್ಥರು ಇದ್ದರು.