ಮೂಡಲಗಿಯಲ್ಲಿ ಏರ್ಪಡಿಸಿದ್ದ ಭಕ್ತಿ ಸಂಜೀವನ ಕೂಟ ಕಾರ್ಯಕ್ರಮವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಸರ್ವೋತ್ತಮ ಜಾರಕಿಹೊಳಿ, ವಿಜಯಕುಮಾರ ಮೂಡಲಗಿ, ಪಿ.ಎಸ್. ಮಾಚಯ್ಯ ಮ್ಯಾಥ್ಯೂ, ಮರೆಪ್ಪ ಮರೆಪ್ಪಗೋಳ, ಟಿ.ಆರ್. ಕಾಗಲ್, ಮಡ್ಡೆಪ್ಪ ತೋಳನವರ ಇತರರಿದ್ದರು. 
ಜಿಲ್ಲೆ

ಕ್ರೈಸ್ತ ಧರ್ಮೀಯರು ಶಾಂತಿಪ್ರಿಯರು

ಮೂಡಲಗಿ: ಕ್ರೈಸ್ತರು ಶಾಂತಿಪ್ರಿಯರು, ಸೇವಾ ಮನೋಭಾವವುಳ್ಳವರು. ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತಂದಿದ್ದಾರೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.


ಪಟ್ಟಣದ ಮೆಥೋಡಿಸ್ಟ್ ಚರ್ಚ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಭಕ್ತಿ ಸಂಜೀವನ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭಾರತದಲ್ಲಿ ಎಲ್ಲ ಧರ್ಮಗಳು ಶ್ರೇಷ್ಠವಾಗಿದ್ದು, ಬೈಬಲ್ ಸಂದೇಶ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮೆಥೋಡಿಸ್ಟ್ ಚರ್ಚ್ ಸಭಾಪಾಲಕ ವಿಜಯಕುಮಾರ ಮೂಡಲಗಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನ್ಯೂ ಹಾರ್ವೆಸ್ಟ್ ಚರ್ಚ್‌ನ ಪಿ.ಎಸ್. ಮಾಚಯ್ಯ ಮ್ಯಾಥ್ಯೂ ದೈವ ಸಂದೇಶ ನೀಡಿದರು. ಮರೆಪ್ಪ ಮರೆಪ್ಪಗೋಳ, ಡಾ.ಅನಿಲ ಪಾಟೀಲ, ಟಿ.ಆರ್. ಕಾಗಲ್, ಮಡ್ಡೆಪ್ಪ ತೋಳನವರ, ರವೀಂದ್ರ ಸೋನವಾಲ್ಕರ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಸುಭಾಷ ಸಣ್ಣಕ್ಕಿ, ಯಶವಂತ ಮರೆನ್ನವರ, ಪ್ರಭಾಕರ ಬಂಗೆನ್ನವರ, ಹಣಮಂತ ಹವಳೆವ್ವಗೋಳ ಮತ್ತಿತರರು ಇದ್ದರು. ಶಾಸಕ ರಮೇಶ ಜಾರಕಿಹೊಳಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶಿಕ್ಷಕ ಎ.ಪಿ.ಪರಸನ್ನವರ ನಿರೂಪಿಸಿ, ವಂದಿಸಿದರು.