ಜಿಲ್ಲೆ

ಶಿಲುಬೆ ಧ್ವಂಸ ಮಾಡಿದ ದುಷ್ಕರ್ಮಿಗಳ ಬಂಧಿಸಿ...

ಪ್ರಶಾಂತ ಜಿ. ಭಾಗ್ವತ

ಭಾರತೀಯ ಕ್ರೈಸ್ತ ಒಕ್ಕೂಟ ಆಗ್ರಹ

ಸಮಾಜದಲ್ಲಿ ಶಾಂತಿ ಕದಡಲು ಸಂಚು

ವಿಜಯವಾಣಿ ಸುದ್ದಿಜಾಲ ಉಡುಪಿ

ಮೂಡುಬೆಳ್ಳೆಯ ಕಟ್ಟಿಂಗೇರಿ ಗ್ರಾಮದಲ್ಲಿರುವ ಕುದ್ರಮಾಲೆಯ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ಧ್ವಂಸ ಮಾಡಲಾಗಿದ್ದು, ಇದು ಕ್ರೈಸ್ತರ ಭಾವನೆಗಳಿಗೆ ನೋವು ತಂದಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್​ ಜತ್ತನ್ನ ಆಗ್ರಹಿಸಿದ್ದಾರೆ.

30 ವರ್ಷದ ಹಿಂದೆ ಜೋಸೆಫ್​ ವಲೇರಿಯನ್​ ಲೋಬೊ ತನ್ನ ಸ್ವಂತ ಜಾಗದಲ್ಲಿ ಶಿಲುಬೆ ನಿರ್ಮಿಸಿದ್ದು, ಪ್ರತಿ ವರ್ಷದ ಉಪವಾಸ ದಿನಗಳಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ಸೇರಿ ಪ್ರಾರ್ಥನೆ ಮಾಡಲಾಗುತ್ತಿತ್ತು. ಫೆ.19ರಂದು ಶಿಲುಬೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಸಮುದಾಯದ ಭಕ್ತರಿಗೆ ಅಪಾರ ನೋವು ತಂದಿದೆ. ಮೇಲ್ನೋಟಕ್ಕೆ ಇದು ವ್ಯವಸ್ಥಿತ ಕೃತ್ಯವಾಗಿದ್ದು ನಾಡಿನ ಶಾಂತಿ ಕದಡುವ ಕಾರ್ಯವಾಗಿದೆ.

ಉಡುಪಿ ಜಿಲ್ಲೆಯು ಸಾಮರಸ್ಯ ಮತ್ತು ಎಲ್ಲ ಧರ್ಮದವರು ಸಹೋದರ ಮತ್ತು ಪ್ರೀತಿ ಭಾವದಿಂದ ಬಾಳುತ್ತಿದ್ದಾರೆ. ಇಂತಹ ದಿನಗಳಲ್ಲಿ ಧರ್ಮಗಳ ನಡುವೆ ವೈಮನಸ್ಸು ಸೃಷ್ಟಿಸಲು ಇದು ಕಾರಣವಾಗಿದೆ. ಯಾರೇ ಈ ಕೃತ್ಯ ಮಾಡಿದ್ದರೂ ತಕ್ಷಣ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಪ್ಲಾಲಿವೆನ್​ ಫೆರ್ನಾಂಡಿಸ್​ ಅವರು ಘಟನೆಗೆ ಸಬಂಧಿಸಿ ಫೆ.21ರಂದು ಶಿರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತ್ವರಿತವಾಗಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಸಮಸ್ತ ಕ್ರೈಸ್ತರ ಪರವಾಗಿ ಆಗ್ರಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.