ಜಿಲ್ಲೆ

ಮಣಿಪುರ ಹಿಂಸಾಚಾರ ಖಂಡಿಸಿ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಮೌನ ಪ್ರತಿಭಟನೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಣಿಪುರ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ಖಂಡಿಸಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲ 125 ಚರ್ಚ್ ಗಳ ವಠಾರದಲ್ಲಿ ಭಾನುವಾರ ಬೆಳಗ್ಗೆ ಬಲಿ ಪೂಜೆಯ ಬಳಿಕ ಮೌನ ಪ್ರತಿಭಟನೆ ನೆರವೇರಿತು. ಕಥೋಲಿಕ್ ಸಭಾ ಕಾರ್ಯಕ್ರಮದ ನೇತೃತ್ವ ವಹಿಸಿತ್ತು.
ಧರ್ಮ ಪ್ರಾಂತ್ಯದ ಶ್ರೇಷ್ಟ ಗುರು ಫಾ. ಮ್ಯಾಕ್ಸಿಮ್ ನೊರೋನ್ಹಾ ಮತ್ತು ಕ್ಯಾಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಆಲ್ವಿನ್ ಡಿ ಸೋಜಾ ಅವರು ನೀಡಿದ ಕರೆಯಂತೆ ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಮೌನಪ್ರತಿಭಟನೆ ನಡೆಯಿತು.
ಕುಲಶೇಖರದ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ.ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ವಂ ಐವನ್ ಕೊರ್ಡೆರೊ, ವಂ.ಪಾವ್ಲ್ ಡಿಸೋಜ, ಉಪಾಧ್ಯಕ್ಷೆ ರೂತ್ ಕಸ್ಟಲಿನೊ ಉಪಸ್ಥಿತರಿದ್ದರು.
ಪನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನಲ್ಲಿ ಧರ್ಮಗುರು ವಂ.ವಿಕ್ಟರ್ ಡಿ’ಮೆಲ್ಲೊ, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷಾಲ್ವಿನ್ ಡಿಸೋಜ, ಕಥೋಲಿಕ್ ಸಭಾ ಸ್ಥಳೀಯ ಅಧ್ಯಕ್ಷ ಉರ್ಬನ್ ಸೆರಾವೊ, ಪಾಲನಾ ಸಮಿತಿ ಉಪಾಧ್ಯಕ್ಷೆ ಸರಿತಾ ಡಿಸೋಜ, ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ಹಾ, ಸರ್ವ ಆಯೋಗದ ಅಧ್ಯಕ್ಷ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು.
ವಾಮಂಜೂರು ಸಂತ ಜೋಸೆಫ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಸಹಾಯಕ ಧರ್ಮಗುರು ವಂ.ಐವನ್ ಅರೈನ್ ಡಿಸೋಜ, ಕಥೋಲಿಕ್ ಸಭಾ ಅಧ್ಯಕ್ಷ ಪೆಟ್ರಿಕ್ ಲೋಬೊ ಇದ್ದರು.
ಕುಳೂರು ಸಂತ ಅ0ತೋನಿ ಚರ್ಚ್‌ನಲ್ಲಿ ಧರ್ಮಗುರು ವಂ.ವಿಕ್ಟರ್ ವಿಜಯ ಲೋಬೊ, ಫಾ.ಅರುಣ್ ಮೆಂಡೊನ್ಸಾ, ಕಥೋಲಿಕ್ ಸಭಾ ಅಧ್ಯಕ್ಷ ಫಿಲೋಮಿನಾ ವೇಗಸ್, ಸಿ.ಜಾನೆಟ್ ಭಾಗವಹಿಸಿದ್ದರು.
ಮೂಲ್ಕಿಯ ಇಮ್ಯಾಕ್ಯುಲೇಟ್ ಕನ್‌ಷಪ್ಶನ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ.ಸಿಲ್ವೆಸ್ಟರ್ ಡಿಕೋಸ್ತ, ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ರೋಲ್ಫಿ ಡಿ‘ಕೋಸ್ತಾ, ಮೂಲ್ಕಿ ಘಟಕದ ಅಧ್ಯಕ್ಷ ಎಮಿಲ್ಡಾ ರೆಬೆಲ್ಲೊ ಭಾಗವಹಿಸಿದ್ದರು.