ನೆಲಮಂಗಲ ಚೆನ್ನಪ್ಪ ಬಡಾವಣೆಯಲ್ಲಿನ ಅಚಾರ್ಯ ಕುಟೀರದಲ್ಲಿ 7ನೇ ನವರಾತ್ರಿ ಉತ್ಸವಕ್ಕೆ ನಗರಸಭೆ ಅದ್ಯಕ್ಷ ಎನ್​.ಗಣೇಶ್​ ಚಾಲನೆ ನೀಡಿದರು. ಆಚಾರ್ಯ ಶ್ರೀವಿಜಯಕುಮಾರ ಗುರೂಜಿ, ನಗರಸಭೆ ಸದಸ್ಯ ಸಿ.ಪ್ರದಿಪ್​, ಗಂಗಾಧರ್​ರಾವ್​, ಮಾಜಿ ಅಧ್ಯೆ ಲತಾಹೇಮಂತ್​ಕುಮಾರ್​, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್​ಕುಮಾರ್​ ಇದ್ದರು. 
ಜಿಲ್ಲೆ

ಚೌಡೇಶ್ವರಿ ಸಾಂಸತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಪಟ್ಟಣದ ತಿಲಕ್​ ವೃತ್ತದಲ್ಲಿನ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಒಂಭತ್ತು ದಿನಗಳು ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಆನೇಕಲ್​ ತಾಲೂಕಿನಲ್ಲಿ ದಸರಾ ಉತ್ಸವ ನೋಡಲು ಜನಸಾಗರವೇ ಸೇರುತ್ತದೆ ಎಂದು ಚೌಡೇಶ್ವರಿ ತೊಗಟ ವೀರ ಕ್ಷತ್ರಿಯ ಸಂದ ಅಧ್ಯಕ್ಷ ಶ್ರೀನಿವಾಸ್​ ತಿಳಿಸಿದ್ದಾರೆ. ದಸರಾ ಉತ್ಸವದ ದಿನದಂದು ಬೆಳಗ್ಗೆ ಎಂಟು ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಉಪಾಧ್ಯಕ್ಷ ಲ್ಮನಾರಾಯಣ್​ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸೆ.23ರಂದು ಅಮೃತವರ್ಷಿಣಿ ನಾಟ್ಯ ದೇಗುಲ ಕಾರ್ಯಕ್ರಮ ವಿದುಷಿ ವರ್ಷಿಣಿ ಮತ್ತು ತಂಡದವರಿಂದ, 24ರಂದು ಕನ್ನಡ ಹಾಗೂ ತೆಲುಗು ಭಕ್ತೀಗಿತೆಗಳು ಕಾರ್ಯಕ್ರಮ ಟೈಟಾನ್​ ಕೃಷ್ಣ ಆಕಾಶವಾಣಿ ಕಲಾವಿದರು ಮತ್ತು ಪಿ ರಾಧಾ ರಮಣಾಚಾರಿ ತಂಡದವರಿಂದ, 25ರಂದು ಸುಗಮ ಸಂಗೀತ ವಿದ್ವಾನ್​ ಎಲ್​.ಮಲ್ಲೇಶ ಆರಾಧ್ಯ ಮೊಮ್ಮಗಳು ಚೈತ್ರ ಭರತ್​ ಮತ್ತು ತಂಡ, 26ರಂದು ನಾದಸ್ವರ ಕಚೇರಿ ಕ್ಲಾಸಿಕಲ್​ ಮ್ಯೂಸಿಕ್​ ಭರತನಾಟ್ಯ ಕಾರ್ಯಕ್ರಮ ನಾಟ್ಯಮಯೂರಿ ವಾಗ್ದೇವಿ ಕಲಕೇಂದ್ರ, ಡೋಲು ವಿದ್ವಾನ್​ ಎಸ್​.ಮಂಜುನಾಥ್​ ತಂಡದವರಿಂದ, 27ರಂದು ಅನ್ನಮಯ್ಯ ಕೀರ್ತನೆಗಳು ಮತ್ತು ಗಂಟಸಾಲ ಹಾಡುಗಳು ಕಾರ್ಯಕ್ರಮಕ್ಕಾಗಿ ನಾಡ ಶಿವಪ್ರಸಾದ್​ ಹಾಗೂ ರುನಾಥ್​ ತಂಡ, 28ರಂದು ನೃತ್ಯ ಸಂಜೆ ಆನೇಕಲ್​ ಜಗ ಮಾಸ್ಟರ್​ ಪ್ರಸ್ತುತಪಡಿಸುವ ಟೀಮ್​ ರಿಬಾರ್ನ್​ ತಂಡದವರಿಂದ, 29ರಂದು ಸಂಗೀತ ರಸ ಸಂಜೆ ರಾಜೇಶ್​ ಹಾಗೂ ತಂಡದವರಿಂದ, 30ರಂದು ಭಕ್ತೀಗಿತೆಗಳು ದಿವ್ಯ ಸಂಕೀರ್ತನ ಯತಿರಾಜ್​ ಹಾಗೂ ತಂಡದವರಿಂದ, ಅ.1ರಂದು ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅ.2ರಂದು ಊರಿನ ರಾಜ್ಯ ಮಾರ್ಗಗಳಲ್ಲಿ ಶ್ರೀಚೌಡೇಶ್ವರಿ ಅಮ್ಮನವರ ಆನೆ ಅಂಬಾರಿ ಉತ್ಸವ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮತ್ತು ರಾತ್ರಿ 7 ಂಟೆಗೆ ಪಂಜಿನ ಕವಾಯಿತು. ಪೈಲ್ವಾನ್​ ಮುನಿರಾಜು ಹಾಗೂ ತಂಡವರಿಂದ ಆಯೋಜನೆ ಮಾಡಲಾಗಿದೆ.

ಅಮ್ಮನವರಿಗೆ ವಿಶೇಷ ಅಲಂಕಾರ : ಚೌಡೇಶ್ವರಿ ದೇವಾಲಯದಲ್ಲಿ ದೇವಿಗೆ ನವರಾತ್ರಿಯ ದಿನಗಳು ವಿಶೇಷ ಅಲಂಕಾರ ಮಾಡಿ ದೇವಿಯನ್ನು ಪೂಜಿಸಲಾಗುತ್ತಿದೆ. ಚೌಡೇಶ್ವರಿ ದೇವಿಗೆ ಸೋಮವಾರ ಶೈಲಪುತ್ರಿ ಮತ್ತು ಸೆ.23ರಂದು ಬ್ರಹ್ಮಚಾರಿಣಿ, ಸೆ.24ರ ಬುಧವಾರ ಚಂದ್ರಂಟಾ, ಸೆ.25ರ ಗುರುವಾರ ಸಿದ್ದಿರಾತ್ರಿ, 26ರಂದು ಕೂಷ್ಮಂಡ, 27ರಂದು ಸ್ಕಂದಮಾತ, 28ರಂದು ಕಾತ್ಯಾಯಿತಿ, 29ರಂದು ಸರಸ್ವತಿ, 30ರಂದು ಕಾಳರಾತ್ರಿ, ಅ.1ರಂದು ಮಹಾಗೌರಿ, ಅ.2ರ ದಸರಾ ಉತ್ಸವದಂದು ಸರ್ವಾಲಂಕಾರ ಮಾಡಲಾಗುತ್ತದೆ.