ಚಿಂಚೋಳಿ: ಪಟ್ಟಣದ ಡಿಎಸ್ಪಿ ಕಚೇರಿಯಲ್ಲಿ ಮಂಗಳವಾರದಂದು ಇಂಟರ್ ಸ್ಟೇಟ್ ಪೋಲಿಸ್ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.
ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಹಾಗೂ ನೆರೆಯ ತೆಲಂಗಾಣದ ವಿಕರಬಾದ ಎಸ್ಪಿ ಕೋಟಿರೆಡ್ಡಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೆಲಂಗಾಣ ಚುನಾವಣೆಗೆ ಗಾಡಿಯಲ್ಲಿ ಭದ್ರತೆ, ಅಕ್ರಮ ಚಟುವಟಿಕೆ ತಡೆಯುವ ಬಗ್ಗೆ ಚರ್ಚಿಸಲಾಯಿತು. ಶಾಂತಿಯುತ ಚುನಾವಣೆಗೆ ಸಹಕಾರ ನೀಡಲು ತೆಲಂಗಾಣ ಪೊಲೀಸ್ ಅಧಿಕಾರಿಗಳು ಕೋರಿದರು.
ಈ ವೇಳೆ ಚಿಂಚೋಳಿ ಡಿಎಸ್ಪಿ ಕೆ.ಬಸವರಾಜ, ತಾಂಡೂರ ಡಿಎಸ್ಪಿ ಶೇಖರಗೌಡ, ತಾಂಡೂರ ಸಿಪಿಐ ರಾಮಬಾಬು, ಚಿಂಚೋಳಿ ಸಿಪಿಐ ಅಂಬರಾಯ ಕಾಮನಮನಿ, ಕೊಡಂಗಲ ಸಿಪಿಐ ರಾಮುಲು, ಚಿಂಚೋಳಿ ಪಿಎಸ್ಐ ಹಣಮಂತಪ್ಪ ಬಂಕಲಗಿ, ಪಿಎಸ್ಐ ಮಧು, ಪಿಎಸ್ಐ ವೇನು, ಪಿಎಸ್ಐ ಎ.ಎಸ್.ಪಟೇಲ, ಪಿಎಸ್ಐ ನಂದಿನಿ, ಪಿಎಸ್ಐ ವೆಂಕಟ್ ನಾಯಕ ಸೇರಿದಂತೆ ಅನೇಕರು ಇದ್ದರು.