ಜಿಲ್ಲೆ

ಚಿಂಚೋಳಿ: ಕೊರವಿಯಲ್ಲಿ ಗೋಡೆ ಕುಸಿದು 100ಕ್ಕೂ ಅಧಿಕ ಕುರಿ ಸಾವು

ಕೃಷ್ಣ ಕುಲಕರ್ಣಿ

ಚಿಂಚೋಳಿ: ನಿರಂತರ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು 100ಕ್ಕೂ ಅಧಿಕ ಕುರಿಗಳು ಮೃತಪಟ್ಟ ಘಟನೆ ಕೊರವಿ ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದೆ.

ಕುರಿಗಾಹಿಗಳಾದ ಮಲ್ಲಪ್ಪ ಗುಂಡಪ್ಪ, ಅಣಪ್ಪ ನಾಗಪ್ಪ ಇವರ ಕುರಿದೊಡ್ಡಿಯಲ್ಲಿದ್ದ ಸುಮಾರು 100 ಕ್ಕೂ ಹೆಚ್ಚು ಕುರಿಗಳು ಗೋಡೆಯ ಕಲ್ಲುಗಳಲ್ಲಿ ಸಿಲುಕಿ ಮೃತಪಟ್ಟಿವೆ.

ಕಾಳಗಿ ತಹಸೀಲ್ದಾರ್​, ಸುಲೇಪೇಟ ಸಿ.ಪಿ.ಐ, ಕಾಳಗಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು, ರಟಕಲ್​ ಠಾಣೆ ಪಿಎಸ್ಐ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಸಿದ್ದಾರೆ.