ಜಿಲ್ಲೆ

ಚಂದ್ರಂಪಳ್ಳಿಗೆ ಹೆಚ್ಚಿದ ಒಳಹರಿವು; ನದಿ ಪಾತ್ರದಲ್ಲಿ ಎಚ್ಚರಿಕೆ ವಹಿಸಲು ಸೂಚನೆ

ಕೃಷ್ಣ ಕುಲಕರ್ಣಿ

ಚಿಂಚೋಳಿ: ಚಂದ್ರಂಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚು, ಭೋಗಾವತಿ ನದಿಗೆ 1200 ಕ್ಯೂಸೆಕ್​ ನೀರು ಹರಿ ಬಿಡಲಾಗಿದೆ. ಜನ ಜಾನುವಾರು ಎಚ್ಚರಿಕೆ ವಹಿಸಬೇಕು ಎಂದು ಜಲಾಶಯ ಅಭಿಯಂತ ಚೇತನ ಕಳಸ್ಕರ್​ ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಶನಿವಾರ ಸಾಯಂಕಾಲ ಪ್ರಾರಂಭವಾದ ಜಿಟಿ ಜಿಟಿ ಮಳೆ ಭಾನುವಾರವು ಮುಂದುವರೆದಿದ್ದು, ಚಂದ್ರಂಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಇದೀಗ ಜಲಾಶಯದ ಎರೆಡು ಗೇಟ್ ತೆಗೆದು ನೀರು ಹೊರ ಬಿಡಲಾಗುತ್ತಿದೆ. ಈಗಾಗಲೇ ಜಲಾಶಯಕ್ಕೆ ಒಳ ಹರಿವು 2100 ಕ್ಯೂಸೆಕ್​ ಹರಿದು ಬಂದಿದ್ದು, ಇದೇ ಪ್ರಮಾಣದ ನೀರನ್ನು ಭೋಗಾವತಿ ನದಿಗೆ ಹರಿ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನದಿ ಪಾತ್ರದ ಚಂದ್ರಂಪಳ್ಳಿ, ಐನೋಳ್ಳಿ, ಚಿಂಚೋಳಿ, ಚಂದಾಪೂರ, ಪೋಲಕಪಳ್ಳಿ, ಗರಗಪಳ್ಳಿ, ಭಕ್ತಂಪಳ್ಳಿ, ಇರಕಪಳ್ಳಿ, ಗರಗಪಳ್ಳಿ, ಖರ್ಚಖೇಡ, ಚತ್ರಸಾಲ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳ ಜನತೆ ಜಾಗೃತರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.