ಕಾಸರಗೋಡು: ಕೇರಳ ರಾಜ್ಯದಲ್ಲಿ ಅಮೀಬಿಕ್ ಮಸ್ತಿಷ್ಕ ಜ್ವರ ಪ್ರಕರಣ ಹೆಚ್ಚುತ್ತಿರುವುದರಿಂದ, ಜಿಲ್ಲೆಯಲ್ಲಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆಗಸ್ಟ್ 30ರಿಂದ ಸರಣಿ ಚಟುವಟಿಕೆ ಆರಂಭಿಸಲಾಗಿದ್ದು, ಈ ಮೂಲಕ ಕುಡಿಯುವ ನೀರಿನ ಮೂಲಗಳಾದ ತೆರೆದ ಬಾವಿ, ಕೆರೆಗಳಿಗೆ ಕ್ಲೋರಿನೇಷನ್ ಅಭಿಯಾನ ಆರಂಭಿಸಲಾಯಿತು.
ಕಾಲಿಕ್ಕಡವಿನಲ್ಲಿ ಪಿಲಿಕ್ಕೋಡ್ ಗ್ರಾ.ಪಂ. ಅಧ್ಯಕ್ಷೆ ಪ್ರಸನ್ನ ಕುಮಾರಿ ಉದ್ಘಾಟಿಸಿದರು. ಗ್ರಾಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ವಿ.ಸುಲೋಚನಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಭಾಗವಹಿಸಿದ್ದರು. ಗ್ರಾಪಂ ಸದಸ್ಯ ವಿ.ಪ್ರದೀಪನ್ ಮತ್ತು ರೇಷ್ಮಾ ಪಿ. ಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಪಿ.ವಿ.ಮಹೇಶ್ ಕುಮಾರ್ ವಂದಿಸಿದರು.