ಜಿಲ್ಲೆ

ಕ್ಲೋರಿನೇಶನ್ ಅಭಿಯಾನಕ್ಕೆ ಚಾಲನೆ

ಸೌಮ್ಯ ಆರ್

ಕಾಸರಗೋಡು: ನೀರಿನ ಮೂಲಕ ಹರಡುವ ರೋಗ ನಿವಾರಿಸಲು ಪಡನ್ನ ಗ್ರಾಪಂಯಲ್ಲಿ ಆರೋಗ್ಯ ಇಲಾಖೆ ನಿರ್ದೇಶನ ಪ್ರಕಾರ ಪಡನ್ನ ಗ್ರಾಪಂ ಒಂಬತ್ತನೇ ವಾರ್ಡ್ ಸದಸ್ಯ, ನಟ ಪಿ.ಪಿ.ಕುಞಿಕೃಷ್ಣನ್ ನೀರಿನ ಮೂಲ ಶುಚೀಕರಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿಯಾನದ ಅಂಗವಾಗಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಬಾವಿಗಳನ್ನು ಸೋಂಕು ರಹಿತಗೊಳಿಸಲು ಕ್ಲೋರಿನೇಷನ್ ನಡೆಸಲಾಯಿತು. ಇ.ವಿ.ಚಿತ್ರಾ, ಕೆ.ಮಾಯಾ, ಎನ್.ಶಾಹಿದಾ, ಯು.ಲತಾ, ಎಂ.ವಿ.ಜಿಶಾ, ಸಿ.ಸುಶೀಲಾ, ಕೆ.ರಮಣಿ, ಟಿ.ವಿ.ವಿನೋದಿನಿ ನೇತೃತ್ವ ವಹಿಸಿದ್ದರು.